ಸ್ಮರಣಾರ್ಥ ಕಾರ್ಯಕ್ರಮಗಳಿಂದ ನೆನಪು ಶಾಶ್ವತ

mandala
Published on

ವಿಜಯವಾಣಿ ಸುದ್ದಿಜಾಲ ಆರ್ಡಿ

ವ್ಯಕ್ತಿಯ ಸ್ಮರಣಾರ್ಥ ಆಯೋಜಿಸುವ ಕಾರ್ಯಕ್ರಮಗಳು ಗೌರವ ಸಮರ್ಪಣೆ, ಸಮಾಜ ಸೇವೆ ಹಾಗೂ ನೆನಪುಗಳನ್ನು ಶಾಶ್ವತಗೊಳಿಸುತ್ತವೆ ಎಂದು ಚಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಶೆಟ್ಟಿ ಚಾರ ಹೇಳಿದರು.

ಅರಸಮ್ಮಕಾನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅರಸಮ್ಮಕಾನು ನವಶಕ್ತಿ ಯುವಕ ಮಂಡಲ ಹಾಗೂ ಮೈತ್ರಿ ಕ್ರಿಕೆಟರ್ಸ್ ಜಂಟಿ ಆಶ್ರಯದಲ್ಲಿ ದಿ.ಸುಧಾಕರ ಪೂಜಾರಿ ಸ್ಮರಣಾರ್ಥ 12 ತಂಡಗಳ 40 ಗಜಗಳ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ ಸುಧಾಕರ ಟ್ರೋಫಿ-2025 ಉದ್ಘಾಟಿಸಿ ಮಾತನಾಡಿದರು.

ಅರಸಮ್ಮಕಾನು ನವಶಕ್ತಿ ಯುವಕ ಮಂಡಲದ ಅಧ್ಯಕ್ಷ ಪ್ರಶಾಂತ ಹೆಗ್ಡೆ ಅಧ್ಯಕ್ಷತೆ ವಹಿಸಿದರು. ಮಡಾಮಕ್ಕಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಶೇಡಿಮನೆ, ಸದಸ್ಯ ಸದಾನಂದ ಪೂಜಾರಿ, ನವಶಕ್ತಿ ಯುವಕ ಮಂಡಲದ ಗೌರವಾಧ್ಯಕ್ಷ ಕೀರ್ತಿಕುಮಾರ್ ಶೆಟ್ಟಿ, ಎಸ್‌ಡಿಎಂಸಿ ಅಧ್ಯಕ್ಷ ಜ್ಯೋತಿ ಸತ್ಯನ್ ಉಪಸ್ಥಿತರಿದ್ದರು. ಪ್ರಶಾಂತ ಹೆಗ್ಡೆ ಸ್ವಾಗತಿಸಿದರು. ವೆಂಕಟೇಶ್ ಉಳ್ಳೂರ್ ವಂದಿಸಿದರು. ಗಣೇಶ್ ಅರಸಮ್ಮಕಾನು ಕಾರ್ಯಕ್ರಮ ನಿರೂಪಿಸಿದರು.

ಸಮಾರೋಪ, ಪ್ರಶಸ್ತಿ ಪ್ರದಾನ

ಸಂಜೆ ಸಮಾರೋಪ ಸಮಾರಂಭದಲ್ಲಿ ಪ್ರಮುಖರಾದ ಪ್ರಶಾಂತ ಹೆಗ್ಡೆ, ಪ್ರದೀಪ್ ಪೂಜಾರಿ ಗೋಳಿಗದ್ದೆ, ದಯಾನಂದ ಪೂಜಾರಿ, ಪ್ರಕಾಶ್ ಕುಲಾಲ, ನವಶಕ್ತಿ ಯುವಕ ಮಂಡಲ ಹಾಗೂ ಮೈತ್ರಿ ಕ್ರಿಕೆಟರ್ಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು. ಅರಸಮ್ಮಕಾನು ತ್ರಿಷಾ ಕ್ರಿಕೆಟರ್ಸ್ ಪ್ರಥಮ ಸ್ಥಾನ ಸ್ಥಾನ ಪಡೆದಿದ್ದು, ಸಿದ್ದಾಪುರದ ಟಾರ್ಗೆಟ್ ದ್ವಿತೀಯ ಸ್ಥಾನಿಯಾಯಿತು. ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net