

ಪಡುಬಿದ್ರಿ: ಇಲ್ಲಿನ ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನದಲ್ಲಿನ ಢಕ್ಕೆಬಲಿ ಪರ್ವದ ನಡುವೆ ಮುರುಡಿ ಬ್ರಹ್ಮಸ್ಥಾನದಲ್ಲಿ ಮಂಗಳವಾರ ಸಂಪನಗೊಂಡ ಢಕ್ಕೆಬಲಿ ಸೇವೆಯಂದು ಶ್ರೀ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಚಿತ್ತೈಸಿ ಮಾಲಿಕೆ ಮಂಗಳಾರತಿಗಳನ್ನು ಸ್ವೀಕರಿಸಿ ಆಶೀರ್ವಚಿಸಿದರು. ಅರ್ಚಕರಾದ ಕೇಶವ ಆಚಾರ್ಯ, ನಂದಕುಮಾರ್ ಆಚಾರ್ಯ, ಪಾತ್ರಿಗಳಾದ ಸುರೇಶ್ ರಾವ್, ಹರಿನಾರಾಯಣ ರಾವ್, ಸುಬ್ರಹ್ಮಣ್ಯ ರಾವ್, ಸೇವಾಕರ್ತರಾದ ಮುರುಡಿ ಚಂದ್ರಶೇಖರ ರಾವ್, ಮುರುಡಿ ಜಯಪ್ರಕಾಶ್ ರಾವ್, ಮುರುಡಿ ರಾಘವೇಂದ್ರ ರಾವ್, ಮುರುಡಿ ಭಾಸ್ಕರ್ ರಾವ್, ಮುರುಡಿ ಹರಿಕೃಷ್ಣ ರಾವ್, ಮುರುಡಿ ಜಗನ್ನಾಥ ರಾವ್, ಗುರಿಕಾರ ಕೊರ್ನಾಯ ಗಿರೀಶ ರಾವ್, ಗುರಿಕಾರ ಬಾಲಪ್ಪ ಪಿ.ಎಸ್. ನಟರಾಜ ರಾವ್, ಗುರಿಕಾರ ಮುರುಡಿ ಜಗದೀಶ್ ರಾವ್, ವನದುರ್ಗಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ವೈ.ಎನ್.ರಾಮಚಂದ್ರ ರಾವ್, ಕೋಶಾಧಿಕಾರಿ ವೈ.ಸುರೇಶ್ ರಾವ್, ಶ್ರೀನಿವಾಸ ರಾವ್, ಪಿ.ಎಸ್.ರಾಘವೇಂದ್ರ ರಾವ್, ರವೀಂದ್ರನಾಥ್ ರಾವ್ ಮತ್ತಿತರರಿದ್ದರು.