ಭೋವಿಸಮುದಾಯದ ಸಮಸ್ಯೆ ಸರಿಪಡಿಸಲು ಸಿಎಂಗೆ ಮನವಿ

C M News - 1
Published on

ಬೆಂಗಳೂರು: ಪಡಿತರ ಚೀಟಿಯಲ್ಲಿ ಭೋವಿ ಜನಾಂಗವನ್ನು ‘ಎಸ್ಸಿ’ ಬದಲು ‘ಎಸ್ಟಿ’ ಎಂದು ಉಲ್ಲೇಖಿಸಲಾಗಿದೆ. ಕೆಲವೆಡೆ ಉಪಜಾತಿಯಲ್ಲಿ ‘ವಡ್ಡರ್’ ಎಂದು ನಮೂದಿಸಲಾಗುತ್ತಿದೆ. ಈ ಲೋಪಗಳನ್ನು ಸರಿಪಡಿಸಬೇಕು ಎಂದು ಚಿತ್ರದುರ್ಗದ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಈ ಸಂಬಂಧ ಸಿಎಂ ಸಿದ್ಧರಾಮಯ್ಯ ಅವರನ್ನು ಗುರುವಾರ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.

ಭೋವಿ ಉಪಜಾತಿಯಲ್ಲ, ಆದ್ದರಿಂದ ಜಾತಿ ಎಂದೇ ನಮೂದಿಸಬೇಕು. ಕೆಲ ಪಡಿತರ ಚೀಟಿಯಲ್ಲಿ ಎಸ್ಟಿ ಎಂದು ಬರುತ್ತಿದೆ. ಇದರಿಂದ ಜನಗಣತಿಗೆ ಅನನುಕೂಲವಾಗುತ್ತಿರುವುದರಿಂದ ಸಮಸ್ಯೆ ಸರಿಪಡಿಸಬೇಕು. ಇಲ್ಲವೇ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಅಥವಾ ಜಾತಿ ಪ್ರಮಾಣಪತ್ರಗಳನ್ನು ಪರಿಗಣಿಸಬೇಕು ಎಂದು ಕೋರಿದರು. ಮನವಿ ಸ್ವೀಕರಿಸಿದ ಸಿಎಂ, ನ್ಯಾ.ಡಾ. ಎಚ್.ಎಸ್. ನಾಗಮೋಹನ್‌ದಾಸ್ ಏಕಸದಸ್ಯ ವಿಚಾರಣಾ ಆಯೋಗಕ್ಕೆ ಕರೆ ಮಾಡಿ ಲೋಪದೋಷಗಳನ್ನು ಶೀಘ್ರವೇ ಸರಿಪಡಿಸುವಂತೆ ಸೂಚಿಸಿದರು.

ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್, ಕೆಪಿಸಿಸಿ ವಕ್ತಾರ ಜಿ.ವಿ. ಸೀತಾರಾಮು, ಹಾವೇರಿ ರವಿಪೂಜಾರ್, ಕಾಳಘಟ್ಟ ಹನುಮಂತಪ್ಪ, ಡಾ. ಗಂಗಾಧರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net