20ರಂದು ಸದಸ್ಯತ್ವ ನೋಂದಣಿ

Bel_Govt Rtd persons
Published on

ಬೆಳ್ತಂಗಡಿ: ಕರ್ನಾಟಕ ಸರ್ಕಾರಿ ನಿವೃತ್ತ ನೌಕರರ ಸಂಘದ ಬೆಳ್ತಂಗಡಿ ತಾಲೂಕು ಘಟಕದ ಆಶ್ರಯದಲ್ಲಿ ಆ.20ರಂದು ಉಜಿರೆಯಲ್ಲಿ ಶಾರದಾ ಮಂಟಪದಲ್ಲಿ ಸದಸ್ಯತ್ವ ನೋಂದಣಿ ಮತ್ತು ಪಿಂಚಣಿ ಮಾಹಿತಿ ಸಮಾವೇಶ ನಡೆಯಲಿದ್ದು ಪೂರ್ವಸಿದ್ಧತೆಗಳ ಬಗ್ಗೆ ಸಮಾಲೋಚನಾ ಸಭೆಯು ಬೆಳ್ತಂಗಡಿಯಲ್ಲಿ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ.ವಿಠಲ ಶೆಟ್ಟಿ ಸಮಾವೇಶದ ಬಗ್ಗೆ ಮಾಹಿತಿ ನೀಡಿದರು. ವಿವಿಧ ಊರುಗಳಿಗೆ ವಿಭಾ ಸಂಘಟಕರನ್ನು ಆಯ್ಕೆ ಮಾಡಲಾಯಿತು. ಉಜಿರೆ, ಧರ್ಮಸ್ಥಳ, ಬೆಳ್ತಂಗಡಿ, ಮಡಂತ್ಯಾರ್, ನಾರಾವಿ, ನಿಡ್ಲೆ, ಗುರುವಾಯನಕೆರೆ ವಲಯಗಳಿಗೆ ತಲಾ ನಾಲ್ಕು ಮಂದಿಯಂತೆ ಸಂಘಟಕರನ್ನು ಆಯ್ಕೆ ಮಾಡಿ ನಿವೃತ್ತರ ಸದಸ್ಯತ್ವ ನೋಂದಣಿಗೆ ಸಹಕರಿಸುವಂತೆ ಕೋರಲಾಯಿತು.

ಸಂಘದ ಕಾರ್ಯದರ್ಶಿ ವಿಶ್ವಾಸ ರಾವ್ ವರದಿ ವಾಚಿಸಿದರು. ವಸಂತ ಸುವರ್ಣ ಪಿಂಚಣಿ ಬಗ್ಗೆ ಮಾಹಿತಿ ನೀಡಿದರು. ಕೋಶಾಧಿಕಾರಿ ಜಗನ್ನಿವಾಸ ರಾವ್ ಲೆಕ್ಕಪತ್ರದ ವಿವರ ನೀಡಿದರು. ಸನ್ಮತ್ ಕುಮಾರ್ ನಾರಾವಿ ಸ್ವಾಗತಿಸಿ, ಕುಸುಮಾವತಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net