ಆಚರಣೆಗಳಿಂದ ವಿಚಾರ ವಿನಿಮಯ: ಶಿಕ್ಷಕಿ ಪ್ರೇಮಲತಾ ಕೇಪುಂಜ ಅಭಿಪ್ರಾಯ

Kdb_Aati Koota
Published on

ಕಡಬ: ಆಟಿ ತಿಂಗಳಲ್ಲಿ ತಯಾರಿಸುವ ಖಾದ್ಯಗಳಲ್ಲಿ ಔಷಧೀಯ ಗುಣಗಳಿವೆ. ಅಲ್ಲದೆ ಎಲ್ಲರೂ ಒಟ್ಟಾಗಿ ಆಟಿ ಆಚರಣೆ ಮಾಡುವ ಮೂಲಕ ಪರಸ್ಪರ ಸಹಕಾರ, ಆಚಾರ-ವಿಚಾರ ವಿನಿಮಯ ಮಾಡಿಕೊಳ್ಳಲು ಸಾಧ್ಯವಿದೆ ಎಂದು ಕಡಬ ಸರಸ್ವತಿ ವಿದ್ಯಾಲಯದ ಶಿಕ್ಷಕಿ ಪ್ರೇಮಲತಾ ಕೇಪುಂಜ ಹೇಳಿದರು.

ಒಕ್ಕಲಿಗ ಸೇವಾ ಸಂಘದ ಮಾತೃ ಸಮಿತಿ ಹಾಗೂ ಮಹಿಳಾ ಘಟಕ, ಯುವ ಘಟಕದ ಆಶ್ರಯದಲ್ಲಿ ಕಡಬದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಶನಿವಾರ ಉಪನ್ಯಾಸ ನೀಡಿದರು.

ಕಡಬ ಒಕ್ಕಲಿಗ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು ಅಧ್ಯಕ್ಷತೆ ವಹಿಸಿದ್ದರು. ಕಡಬ ಸ್ಪಂದನಾ ಸಮುದಾಯ ಸಹಕಾರಿ ಸಂಘದ ಅಧ್ಯಕ್ಷ ಕೇಶವ ಅಮೈ, ಕಡಬ ತಾಲೂಕು ಒಕ್ಕಲಿಗ ಸೇವಾ ಸಂಘದ ಉಪಾಧ್ಯಕ್ಷ ತಮ್ಮಯ್ಯ ಗೌಡ ಸುಳ್ಯ, ತಾಲೂಕು ಯುವ ಘಟಕದ ಅಧ್ಯಕ್ಷ ಪೂರ್ಣೇಶ್ ಬಾಬ್ಲಬೆಟ್ಟು ಉಪಸ್ಥಿತರಿದ್ದರು. ಚೆನ್ನೆಮಣೆ ಆಟ, ನಾನಾ ತಿನಿಸು ತಿನ್ನುವ ಸ್ಪರ್ಧೆ, ಸೋಬಾನೆ ಹಾಡು, ಅದೃಷ್ಟ ಆಟ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ತಾಲೂಕು ಒಕ್ಕಲಿಗ ಸೇವಾ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಕೊಲ್ಲೆಸಾಗು ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಶಾರದಾ ಪ್ರಸ್ತಾವಿಸಿದರು. ಕಾರ್ಯದರ್ಶಿ ಲಾವಣ್ಯ ವಂದಿಸಿದರು. ವೇದಾ ಶಿವರಾಮ್ ಏನೆಕಲ್ಲು , ರೇವತಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net