

ಉಳ್ಳಾಲ: ಜನವರಿ 1ರಿಂದ 20ರವರೆಗೆ ನಡೆಯಲಿರುವ ಕರ್ನಾಟಕ ರಾಜ್ಯ ಮುಸ್ಲಿಂ ಜಮಾತಿನ ಸದಸ್ಯತ್ವ ಸಡಗರದ ಪ್ರಯುಕ್ತ ಸದಸ್ಯತ್ವ ಸಂಕಲ್ಪ ದಿನ ಮಂಜನಾಡಿ ಸುನ್ನೀ ಸೆಂಟರ್‌ನಲ್ಲಿ ಶುಕ್ರವಾರ ನಡೆಯಿತು.
ಮುಸ್ಲಿಂ ಜಮಾಅತ್ ಮಂಜನಾಡಿ ಘಟಕದ ಅಧ್ಯಕ್ಷ ಅಬ್ದುಲ್ ಕರೀಂ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಸ್ಲಿಂ ಜಮಾಅತ್ ಮುಡಿಪು ವಲಯ ಉಪಾಧ್ಯಕ್ಷ ಕೆಎಂಕೆ ಮಂಜನಾಡಿ ಅವರು ಯೂನಿಟ್ ಸದಸ್ಯತ್ವ ಸ್ವೀಕರಿಸುವ ಮೂಲಕ ಸತ್ಪದ ಸಂಕಲ್ಪಕ್ಕೆ ಚಾಲನೆ ನೀಡಿದರು.
ವಲಯ ಪ್ರಧಾನ ಕಾರ್ಯದರ್ಶಿ ಆಲಿ ಪಾರೆ, ಕೋಶಾಧಿಕಾರಿ ಅಹಮದ್, ನಿಕಟಪೂರ್ವ ಅಧ್ಯಕ್ಷ ಹುಸೇನ್, ಇಸ್ಮಾಯಿಲ್, ಮೋಹಿದೀನ್, ಪುತ್ತುಬಾವ ಮೊದಲಾದವರು ಉಪಸ್ಥಿತರಿದ್ದರು.