

ಬಂಟ್ವಾಳ: ಸಿದ್ದಕಟ್ಟೆ ಕುಲಾಲ ಸುಧಾರಕ ಸಂಘದ ವಾರ್ಷಿಕೋತ್ಸವ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಭಾನುವಾರ ಗಾಡಿಪಲ್ಕೆಯಲ್ಲಿ ಜರುಗಿತು.
ಸಂಘದ ಅಧ್ಯಕ್ಷ ರಾಮಯ್ಯ ಕುಲಾಲ್ ಬೊಟ್ಟುಮನೆ ಅಧ್ಯಕ್ಷತೆ ವಹಿಸಿದ್ದರು. ಕುಲಾಲ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್, ದ.ಕ. ಜಿಪಂ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಮೆಸ್ಕಾಂನ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಮಂಜಪ್ಪ ಮೂಲ್ಯ, ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ಬಿ.ಕೃಷ್ಣಪ್ಪ ಕಲ್ಲಡ್ಕ, ನಿವೃತ್ತ ಬ್ಯಾಂಕ್ ಉದ್ಯೋಗಿ ಸೋಮಯ್ಯ ಕುಲಾಲ್ ಹನೈನಡೆ, ಕಿಶೋರ್ ಪಳ್ಳಿಪಾಡಿ, ಶಂಕರ್ ಕುಲಾಲ್ ಸಾಣೂರು ಉಪಸ್ಥಿತರಿದ್ದರು.
ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್ ಪಂಜಿಕಲ್ಲು ಹಾಗೂ ಬಹುಮುಖ ಪ್ರತಿಭೆ ಜ್ಞಾನ ಡಿ.ಅರಳ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಪದಗ್ರಹಣ ಕಾರ್ಯಕ್ರಮ ನಡೆಯಿತು. ಅಧ್ಯಕ್ಷರಾಗಿ ಮನೋಜ್ ಕುಲಾಲ್ ಬಸವನಬೈಲು, ಉಪಾಧ್ಯಕ್ಷರಾಗಿ ಚೈತ್ರ ನಾಗೇಶ್ ಸೂರ್ಯ, ಕಾರ್ಯದರ್ಶಿಯಾಗಿ ಅರುಣ್ ಕುಲಾಲ್ ಕುದ್ಕೋಳಿಬೈಲು, ಕೋಶಾಧಿಕಾರಿಯಾಗಿ ಸುಮತಾ ಪುರುಷೋತ್ತಮ್, ಪ್ರಧಾನ ಸಂಘಟಕರಾಗಿ ಪುರಂದರ ಕುಲಾಲ್ ಕುದ್ಕೊಳಿ ಅಧಿಕಾರ ವಹಿಸಿಕೊಂಡರು. ಕಾರ್ಯದರ್ಶಿ ವಸಂತ ಕುಲಾಲ್ ಓಣಿದಡಿ ವರದಿ ವಾಚಿಸಿದರು. ಚೈತ್ರ ಸೂರ್ಯ ಸ್ವಾಗತಿಸಿದರು. ಅಂಕಿತಾ ವಂದಿಸಿದರು.