

ಮೂಲ್ಕಿ: ಕೃಷಿಕರು ಸಂಘಟಿತರಾಗಿ ಪಾರಂಪರಿಕ ಕೃಷಿಯೊಂದಿಗೆ ವೈಜ್ಞಾನಿಕತೆ ರೂಪಿಸಿ ಬೆಳೆದರೆ ಆರ್ಥಿಕ ಅಭಿವೃದ್ಧಿಯ ಜತೆಗೆ ಸಂಘದ ಮುನ್ನಡೆ ಸಾಧ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಯಶವಂತ ಹೇಳಿದರು.
ಅತಿಕಾರಿಬೆಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯರ ಸಭೆಯಲ್ಲಿ ಮಾತನಾಡಿದರು.
ಸಂಘದ ಅಧ್ಯಕ್ಷ ಗಂಗಾಧರ ವಿ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷೆ ಪ್ಲೇವಿ ಡಿಸೋಜ, ನಿರ್ದೇಶಕರಾದ ಕೃಷ್ಣ ಆರ್.ಶೆಟ್ಟಿ, ಹರೀಶ್ ಶೆಟ್ಟಿ, ಗಂಗಾಧರ ದೇವಾಡಿಗ, ವೆಂಕಟೇಶ, ಹೇಮಂತ ಶೆಟ್ಟಿ, ದಯಾನಂದ ರಾವ್, ಪ್ರವೀಣ, ಪ್ರತಿಭಾ ಡಿ.ಶೆಟ್ಟಿ, ಸಂಧ್ಯಾ, ಕಾರ್ಯನಿರ್ವಹಣಾಧಿಕಾರಿ ಕಿಶೋರ್ ಎಸ್, ಅತಿಕಾರಿಬೆಟ್ಟು ಪಂಚಾಯಿತಿ ಉಪಾಧ್ಯಕ್ಷ ಮನೋಹರ ಕೋಟ್ಯಾನ್, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು ಮತ್ತಿತರರು ಉಪಸ್ಥಿತರಿದ್ದರು.
ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಕಳೆದ ಸಾಲಿನಲ್ಲಿ ಸಂಘಕ್ಕೆ ಅತ್ಯಧಿಕ ಹಾಲು ಹಾಕಿದ ರಾಕೇಶ್ ಕಾಮತ್ ವೆಂಕಟರಮಣ ದೇವಸ್ಥಾನ (ಪ್ರಥಮ), ದಯಾನಂದ ರಾವ್ ಕವತ್ತಾರ್(ದ್ವಿ) ಹಾಗೂ ಫಯಾಜ್ ಅಹಮದ್ ಕಿಲ್ಪಾಡಿ(ತೃತಿಯ) ಅವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಸಂಘದ ಸದಸ್ಯರಿಗೆ ಶೇ.17 ಡಿವಿಡೆಂಡ್ ವಿತರಿಸಲಾಯಿತು. ಕಾರ್ಯನಿರ್ವಹಣಾಧಿಕಾರಿ ಕಿಶೋರ್ ಸ್ವಾಗತಿಸಿ ನಿರೂಪಿಸಿದರು. ವೆಂಕಟೇಶ ವಂದಿಸಿದರು.