

ಕಿನ್ನಿಗೋಳಿ: ಪಟ್ಲ ಫೌಂಡೇಷನ್ ವತಿಯಿಂದ ನೂರಾರು ಕಲಾವಿದರ ಕಣೀರೊರೆಸುವ ಕಾರ್ಯ ವಾಡಿದ್ದು, ಹಲವಾರು ಕಲಾವಿದರಿಗೆ ಮನೆ ಕಟ್ಟಿ ಕೊಡಲಾಗಿದೆ. ಇದೀಗ ಕಿನ್ನಿಗೋಳಿ ಬಹುಮುಖ ಪ್ರತಿಭೆ ಕಾವ್ಯಾ ಕೊಡೆತ್ತೂರು ಅವರಿಗೆ ೌಂಡೇಷನ್ ವತಿಯಿಂದ ಮನೆ ಕಟ್ಟಿ ಕೊಡಲಾಗುತ್ತಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಹೇಳಿದರು.
ಪಟ್ಲ ಫೌಂಡೇಷನ್ ಕಿನ್ನಿಗೋಳಿ ಟಕ ಸ್ಥಾಪಿಸುವ ಬಗ್ಗೆ ಕಿನ್ನಿಗೋಳಿಯ ಸಮೃದ್ಧಿ ಸಭಾಭವನದಲ್ಲಿ ಇತ್ತೀಚೆಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ವಾತನಾಡಿದರು.
ಕಾವ್ಯ ಕೊಡೆತ್ತೂರು ಅವರಿಗೆ ಮೊದಲ ಹಂತದ ಚೆಕ್ ಹಸ್ತಾಂತರಿಸಲಾಯಿತು. ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಕಾಶ್ ಕಿನ್ನಿಗೋಳಿ ಅವರನ್ನು ಗೌರವಿಸಲಾಯಿತು.
ಧರ್ಮದರ್ಶಿ ಹರಿಕೃಷ್ಣ ಪುನರೂರು, ಭುವನಾಭಿರಾಮ ಉಡುಪ, ಜಾಗತಿಕ ಬಂಟರ ಸಂದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಗಿರೀಶ್ ಶೆಟ್ಟಿ ಕಟೀಲು, ಪುರುಷೋತ್ತಮ ಶೆಟ್ತಿ, ದಿವಾಕರ ಕರ್ಕೇರ, ಸ್ವರಾಜ್ ಶೆಟ್ಟಿ ಮತ್ತಿತರರಿದ್ದರು.
ಶರತ್ ಶೆಟ್ಟಿ ಕಿನ್ನಿಗೋಳಿ ನಿರೂಪಿಸಿದರು.