

ಸುಳ್ಯ: ಪ್ರಕೃತಿ ಜತೆ ಒಮ್ಮೆ ಬೆರೆತರೆ, ಪ್ರಕೃತಿ ಅಗಾಧತೆಯ ಒಳ ಹೊಕ್ಕರೆ ಆ ಪರಿಸರದಿಂದ ಹೊರಬರುವುದು ಅಸಾಧ್ಯ ಎಂದು ಪರಿಸರ ತಜ್ಞ, ಗ್ರೀನ್ ಹೀರೋ ಆಫ್ ಇಂಡಿಯಾ ಡಾ.ಆರ್.ಕೆ.ನಾಯರ್ ಹೇಳಿದರು.
ಸುಳ್ಯ ಪ್ರೆಸ್‌ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾದ ಮೀಟ್ ದಿ ಪ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪರಿಸರ ಅಧ್ಯಯನ ನಡೆಸುವ ಸರ್ಟಿಫಿಕೇಟ್ ಕೋರ್ಸ್ ಆರಂಭಿಸುವ ಇರಾದೆ ಇದೆ. ತಜ್ಞರ ಜತೆ ಚಿಂತನೆ ನಡೆಸಲಾಗುತ್ತಿದೆ. ತಮ್ಮದೇ ಕಾಡುಗಳಲ್ಲಿ ಬಂದು ನಿರ್ದಿಷ್ಟ ದಿನಗಳ ಅಧ್ಯಯನ ನಡೆಸಿದರೆ ಸರ್ಟಿಫಿಕೇಟ್ ಕೊಡುವ ಕೋರ್ಸ್ ಅದು. ಹೊಸ ತಲೆಮಾರಿನಲ್ಲಿ ಪರಿಸರ ಪ್ರೀತಿ ಬೆಳೆಸಲು ಇದು ಸಹಾಯವಾಗಬಹುದು ಎಂದು ತಿಳಿಸಿದರು.
ಡಾ.ಆರ್.ಕೆ.ನಾಯರ್ ಅವರನ್ನು ಪ್ರೆಸ್‌ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ಸುಳ್ಯ ಪ್ರೆಸ್‌ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ ಅಧ್ಯಕ್ಷತೆ ವಹಿಸಿದ್ದರು. ಪ್ರೆಸ್‌ಕ್ಲಬ್ ಗೌರವಾಧ್ಯಕ್ಷ ಹರೀಶ್ ಬಂಟ್ವಾಳ್, ಕೋಶಾಧಿಕಾರಿ ಈಶ್ವರ ವಾರಾಣಸಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಗಿರೀಶ್ ಅಡ್ಪಂಗಾಯ ಸ್ವಾಗತಿಸಿದರು. ನಿರ್ದೇಶಕ ಗಂಗಾಧರ ಕಲ್ಲಪಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಜತೆ ಕಾರ್ಯದರ್ಶಿ ಹಸೈನಾರ್ ಜಯನಗರ ವಂದಿಸಿದರು.
ಒಂದು ಎಕ್ರೆ ಸ್ಥಳದಲ್ಲಿ ಆರಂಭಗೊಂಡ ಕಾಡು ಬೆಳೆಸುವ ಯೋಜನೆ ಇಂದು 12 ರಾಜ್ಯಗಳಲ್ಲಿ 32 ಲಕ್ಷಕ್ಕೂ ಅಧಿಕ ಗಿಡಗಳನ್ನು ಒಳಗೊಂಡ 123 ಕಾಡು ಪೂರ್ತಿಗೊಂಡಿದೆ. ಭೂಕಂಪ ಪೀಡಿತ ಕಚ್ ಪ್ರದೇಶದಲ್ಲಿ ನಿರ್ಮಿಸಿದ ಸ್ಮತಿ ವನದಲ್ಲಿ 5.75 ಲಕ್ಷ ಗಿಡ ನೆಡಲಾಗಿದೆ. 5 ಲಕ್ಷ ಗಿಡ ನೆಡುವ ಯೋಜನೆ ಇದೆ. ಡಾ.ಆರ್.ಕೆ.ನಾಯರ್, ಪರಿಸರ ತಜ್ಞ