ವೈದ್ಯಕೀಯ ಕ್ಷೇತ್ರ ಯಶಸ್ಸಿಗೆ ಫಾರ್ಮಸಿ ವಿಭಾಗವೇ ಆಧಾರ ಸ್ತಂಭ

6LNG01
ಲಿಂಗಸುಗೂರು ಸಮೀಪದ ಕೆಸರಟ್ಟಿಯ ಸ್ವಾಮಿ ವಿವೇಕಾನಂದ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಜರುಗಿದ ವಿಶ್ವ ಔಷಧಿ ತಜ್ಞರ ದಿನಾಚರಣೆ ಕಾರ್ಯಕ್ರಮವನ್ನು ಪ್ರಾಚಾರ್ಯ ಡಾ.ರಾಜಶೇಖರ್ ಉದ್ಘಾಟಿಸಿದರು. ಪ್ರಾಚಾರ್ಯ ಅಮರೇಶ ಹಿರೇಮಠ, ಉಪನ್ಯಾಸಕರಾದ ಜಯಶೀಲ, ಆಲ್ವಿನ್, ಶ್ರೀಲಕ್ಷ್ಮೀ ಪಾಟೀಲ್, ಸಾಹೀರ್, ಗೂಡುಸಾಬ ಇದ್ದರು.
Published on

ಲಿಂಗಸುಗೂರು: ವೈದ್ಯಕೀಯ ಕ್ಷೇತ್ರದಲ್ಲಿ ನಾನಾ ವಿಭಾಗಗಳ ಪೈಕಿ ಕ್ಷೇತ್ರದ ಯಶಸ್ವಿಗೆ ಫಾರ್ಮಸಿ ವಿಭಾಗವು ಆಧಾರ ಸ್ತಂಭವಾಗಿದೆ ಎಂದು ಸ್ವಾಮಿ ವಿವೇಕಾನಂದ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಪ್ರಾಚಾರ್ಯ ಡಾ.ರಾಜಶೇಖರ್ ಹೇಳಿದರು.

ಪಟ್ಟಣಕ್ಕೆ ಸಮೀಪದ ಕೆಸರಟ್ಟಿಯ ಸ್ವಾಮಿ ವಿವೇಕಾನಂದ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಈಚೆಗೆ ಜರುಗಿದ ವಿಶ್ವ ಔಷಧಿ ತಜ್ಞರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ವೈದ್ಯಕೀಯ ಮತ್ತು ಇಂಜಿನೀಯರಿಂಗ್ ಉನ್ನತ ವ್ಯಾಸಂಗದಿಂದ ಅಲ್ಪ ಅಂಕಗಳಲ್ಲಿ ಕೈ ತಪ್ಪಿದ ಬಹುತೇಕ ವಿದ್ಯಾರ್ಥಿಗಳಿಗೆ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಸ್ಥಾಪನೆಯಿಂದ ಅನುಕೂಲವಾಗಿದೆ ಎಂದರು. ಪ್ರಾಚಾರ್ಯ ಅಮರೇಶ ಹಿರೇಮಠ, ಉಪನ್ಯಾಸಕರಾದ ಜಯಶೀಲ, ಆಲ್ವಿನ್, ಶ್ರೀಲಕ್ಷ್ಮೀ ಪಾಟೀಲ್, ಸಾಹೀರ್, ಗೂಡುಸಾಬ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net