ಬಾಂಧವ್ಯ ಫೌಂಡೇಶನ್‌ನಿಂದ ಬಾಲಕಿಗೆ ವೈದ್ಯಕೀಯ ನೆರವು

kota
Published on

ಕೋಟ: ಬಾಂಧವ್ಯ ಫೌಂಡೇಶನ್‌ನ ನೆರವು ಯೋಜನೆಯಿಂದ, ಕರುಳಿನ ಸಮಸ್ಯೆಯಿಂದ ಬಳಲುತ್ತಿರುವ ಪ್ರಧನ್ಯಾ ಎಂಬ ಬಾಲಕಿಗೆ 50,000 ರೂ. ವೈದ್ಯಕೀಯ ನೆರವನ್ನು ಸಾಂಕೇತಿಕವಾಗಿ ಹಸ್ತಾಂತರಿಸಲಾಯಿತು.

ಬಾಂಧವ್ಯ ಟ್ರಸ್ಟ್ ಮೂಲಕ ಆಕೆ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ನೀಡಲಾಯಿತು. ಬ್ರಹ್ಮಾವರ ಬೋರ್ಡ್ ಶಾಲಾ ಮಕ್ಕಳಿಗೆ ರಾಜ್ಯಮಟ್ಟದಲ್ಲಿ ವಾಲಿಬಾಲ್ ತಂಡ ಪ್ರತಿನಿಧಿಸುವ 4 ತಂಡದ 45 ಮಕ್ಕಳಿಗೆ ಉತ್ತಮ ಗುಣಮಟ್ಟದ ಕ್ರೀಡಾ ಸಮವಸ್ತ್ರ, ಹಂಗಾರಕಟ್ಟೆ ದೂಳಂಗಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 57 ಮಕ್ಕಳಿಗೆ ಐಡಿ ಕಾರ್ಡ್ ಮತ್ತು ಬೆಲ್ಟ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಡಿಜಿ ಬ್ಯಾಟನ್ ಪ್ರಶಸ್ತಿ ವಿಜೇತ ಸುನೀಲ್ ಪಾಂಡೇಶ್ವರ ಅವರನ್ನು ಸನ್ಮಾನಿಸಲಾಯಿತು. ಬಾಂಧವ್ಯ ಸಂಸ್ಥೆ ಮುಖ್ಯಸ್ಥ ದಿನೇಶ್ ಸ್ವಾಗತಿಸಿದರು. ಉದ್ಯಮಿ ಜೋಸೆಫ್ ಎಲಿಯಾಸ್ ಮಿನೇಜಸ್, ಬ್ರಹ್ಮಾವರ ಠಾಣೆ ಎಎಸ್‌ಐ ಜಯಕರ್ ಐರೋಡಿ, ಸಾಲಿಕೇರಿ ಶಾಖಾ ಅಂಚೆ ಪಾಲಕಿ ರೇಷ್ಮಾ ವಾಸುದೇವ ನಾಯಕ್, ಉಪಪ್ರಾಂಶುಪಾಲರಾದ ಉಮಾ.ಪಿ., ತಾಲೂಕು ದೈಹಿಕ ಶಿಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ, ದೂಳಂಗಡಿ ಶಾಲೆ ಮುಖ್ಯಶಿಕ್ಷಕ ಪ್ರೆಸಿಲ್ಲಾ ಮತ್ತು ಮತ್ತಿತರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಕಿ ಜಯಲಕ್ಷ್ಮೀ ಶೆಟ್ಟಿ ನಿರೂಪಿಸಿದರು, ಸುಧೀರ್ ಬಿ.ಪೂಜಾರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net