ಈಜು ಸ್ಪರ್ಧೆಯಲ್ಲಿ ಸಹೋದರರಿಯರಿಗೆ ಪದಕ

vidyabharati
ಈಜು ಸ್ಪರ್ಧೆಯಲ್ಲಿ ಬಹುಮಾನ ಗೆದ್ದ ಸಹೋದರಿಯರು.
Published on

ಬಂಟ್ವಾಳ: ಬೆಂಗಳೂರು ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ನಡೆದ ವಿದ್ಯಾಭಾರತಿ ಕರ್ನಾಟಕ ರಾಜ್ಯಮಟ್ಟದ 14 ವರ್ಷ ಒಳಗಿನ ಹುಡುಗಿಯರ ಈಜು ಸ್ಪರ್ಧೆಯಲ್ಲಿ ಕಲ್ಲಡ್ಕ ಶ್ರೀ ರಾಮ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಅನನ್ಯ ಎ.ಆರ್.200 ಮೀ ಬಟರ್ ಫ್ಲೈಮತ್ತು 4*100 ಮೀ.ಫ್ರೀಸ್ಟೈಲ್ ರಿಲೇಯಲ್ಲಿ 2ಬೆಳ್ಳಿ ಮತ್ತು 200 ಮೀ. ಬ್ಯಾಕ್ ಸ್ಟ್ರೋಕ್ ಮತ್ತು 200 ಮೀ. ಇಂಡಿ ವಿಜುವಲ್ ಮೆಡ್ಲೆಯಲ್ಲಿ 2 ಕಂಚು ಪಡೆದಿದ್ದಾರೆ. 17ವರ್ಷ ಒಳಗಿನ ಹುಡುಗಿಯರ ಈಜು ಸ್ಪರ್ಧೆಯಲ್ಲಿ 9ನೇ ತರಗತಿಯ ಅನರ್ಘ್ಯ ಎ.ಆರ್.200 ಮೀ ಇಂಡಿ ವಿಜುವಲ್ ಮೆಡ್ಲೆ, 400 ಮೀ. ಇಂಡಿವಿಜುವಲ್ ಮೆಡ್ಲೆ ಮತ್ತು 4*100 ಮೀ.ಮೆಡ್ಲೆ ರಿಲೇಯಲ್ಲಿ 3 ಬೆಳ್ಳಿ ಮತ್ತು 200ಮೀ ಬ್ಯಾಕ್ ಸ್ಟ್ರೋಕ್‌ನಲ್ಲಿ ಕಂಚು ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ರೇಷ್ಮೆ ಇಲಾಖೆಯ ನಿವೃತ್ತ ಇನ್ ಸ್ಪೆಕ್ಟರ್ ಬಿ.ಕೆ.ನಾಯ್ಕ ಅವರ ಶಿಷ್ಯೆಯರಾಗಿದ್ದು ಮಂಗಳೂರಿನ ಅಲೋಶಿಯಸ್ ವಿವನ್ ಈಜುಕೊಳದ ಮುಖ್ಯ ತರಬೇತುದಾರರಾದ ಲೋಕರಾಜ್ ಮತ್ತು ಸ್ಯಾಂಜುರವರಿಂದ ತರಬೇತಿ ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net