ಸಂಚಾರ ಸಿಕ್ಕು ತಡೆಗೆ ಕ್ರಮ

traffic
Published on

ರಾಮನಗರದಲ್ಲಿ ಪಾರ್ಕಿಂಗ್-ನೋ ಪಾರ್ಕಿಂಗ್ ಸ್ಥಳ ಗುರುತು

* ಜಿಲ್ಲಾಧಿಕಾರಿ ಯಶವಂತ ಗುರುಕರ್ ಆದೇಶ

ರಾಮನಗರ

ಜಿಲ್ಲಾ ಕೇಂದ್ರ ರಾಮನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಹಾಗೂ ವಾಹನ ನಿಲುಗಡೆ ವಿಚಾರದಲ್ಲಿ ಸವಾರರ ನಡುವೆ ನಡೆಯುವ ತಿಕ್ಕಾಟವನ್ನು ತಪ್ಪಿಸಲು ಹೊಸ ಸಂಚಾರ ನಿಯಮಗಳನ್ನು ಜಾರಿಗೆ ತಂದು ಜಿಲ್ಲಾಧಿಕಾರಿ ಯಶವಂತ ವಿ ಗುರುಕರ್ ಆದೇಶಿಸಿದ್ದಾರೆ.

ನಗರದ ಪಿಡಬ್ಲ್ಯೂಡಿ (ಡಿಪಿಒ) ಸರ್ಕಲ್‌ನಿಂದ ವಾಟರ್ ಟ್ಯಾಂಕ್ ಸರ್ಕಲ್‌ವರೆಗೂ ಜಿಲ್ಲಾ ಕ್ರೀಡಾಂಗಣ ಕಡೆಗೆ ಮತ್ತು ವಾಟರ್ ಟ್ಯಾಂಕ್ ಸರ್ಕಲ್‌ನಿಂದ ಕೆಪಿಟಿಸಿಎಲ್ (ಬೆಸ್ಕಾಂ) ಕಚೇರಿವರೆಗೆ ನಗರಸಭೆ ಕಡೆಗೆ ದ್ವಿಚಕ್ರ ವಾಹನ ನಿಲುಗಡೆ ಮತ್ತು ಪರಿವೀಕ್ಷಣೆ ಮಂದಿರದ ಕಡೆಗೆ ನಾಲ್ಕು ಚಕ್ರ ವಾಹನ ಹಾಗೂ ಕೆಪಿಟಿಸಿಎಲ್ (ಬೆಸ್ಕಾಂ) ಕಚೇರಿಯಿಂದ ರೇಲ್ವೆ ನಿಲ್ದಾಣದ ಸರ್ಕಲ್‌ವರೆಗೂ ಅಂಚೆ ಕಚೇರಿ ಕಡೆಗೆ ವಾರದ ಎಲ್ಲ ದಿನಗಳಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆಗೆ ಅವಕಾಶ ಮಾಡಲಾಗಿದೆ.

ರೇಲ್ವೆ ನಿಲ್ದಾಣದ ಸರ್ಕಲ್‌ನಿಂದ ಅರ್ಕಾವತಿ ಬ್ರಿಡ್ಜ್‌ವರೆಗೂ (ಹಳೇ ಬಸ್ ನಿಲ್ದಾಣದ ರಸ್ತೆ) ಉತ್ತರದ ಕಡೆಗೆ ಭಾನುವಾರ, ಮಂಗಳವಾರ, ಗುರುವಾರ ಶನಿವಾರ, ದಕ್ಷಿಣದ ಕಡೆಗೆ ಸೋಮವಾರ, ಬುಧವಾರ, ಶುಕ್ರವಾರ ದ್ವಿ-ಚಕ್ರ ವಾಹನ ನಿಲುಗಡೆಗೆ ಅವಕಾಶ ನೀಡಲಾಗಿದ್ದು, ನಾಲ್ಕು ಚಕ್ರ ವಾಹನ ನಿಲುಗಡೆಗೆ ನಿಷೇಧಿಸಲಾಗಿದೆ.

ಬಜಾರ್ ಸರ್ಕಲ್‌ನಿಂದ ಮಂಡಿಪೇಟೆ ರಸ್ತೆ ಉತ್ತರ-ದಕ್ಷಿಣವಾಗಿದ್ದು, ರಸ್ತೆಯ ಪೂರ್ವದ ಕಡೆಗೆ ಭಾನುವಾರ, ಮಂಗಳವಾರ, ಗುರುವಾರ, ಶನಿವಾರ, ಪಶ್ಚಿಮದ ಕಡೆಗೆ ಸೋಮವಾರ, ಬುಧವಾರ, ಶುಕ್ರವಾರ ದ್ವಿ-ಚಕ್ರ ವಾಹನ ನಿಲುಗಡೆಗೆ ಅವಕಾಶ ಮಾಡುವಂತೆ ಮತ್ತು ನಾಲ್ಕು ಚಕ್ರ ವಾಹನ ನಿಲುಗಡೆಗೆ ನಿಷೇಧಿಸಲಾಗಿದೆ.

ಬಜಾರ್ ಸರ್ಕಲ್‌ನಿಂದ ಆಲದ ಮರ ಸರ್ಕಲ್ ಕಾಮನಗುಡಿ ಸರ್ಕಲ್ ಮಾರ್ಗವಾಗಿ ರಸ್ತೆಯ ಪೂರ್ವದ ಕಡೆಗೆ ಭಾನುವಾರ, ಮಂಗಳವಾರ, ಗುರುವಾರ ಶನಿವಾರ, ಪಶ್ಚಿಮದ ಕಡೆಗೆ ಸೋಮವಾರ, ಬುಧವಾರ, ಶುಕ್ರವಾರ ದ್ವಿ-ಚಕ್ರ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿ ನಾಲ್ಕು ಚಕ್ರಗಳ ವಾಹನ ನಿಲುಗಡೆೆ ನಿಷೇಧಿಸಲಾಗಿದೆ.

ಬಜಾರ್ ರಸ್ತೆಯಿಂದ ಛತ್ರದ ಬೀದಿ ರಸ್ತೆಯಲ್ಲಿ ಪೂರ್ವದ ಕಡೆಗೆ ಭಾನುವಾರ, ಮಂಗಳವಾರ, ಗುರುವಾರ ಶನಿವಾರ, ಪಶ್ಚಿಮದ ಕಡೆಗೆ ಸೋಮವಾರ, ಬುಧವಾರ, ಶುಕ್ರವಾರ ದ್ವಿಚಕ್ರ ವಾಹನ ನಿಲುಗಡೆಗೆ ಅವಕಾಶ ಮಾಡುವಂತೆ ಮತ್ತು ನಾಲ್ಕು ಚಕ್ರ ವಾಹನ ನಿಲುಗಡೆಗೆ ನಿಷೇಧಿಸಲಾಗಿದೆ.

ಅರ್ಕಾವತಿ ಸೇತುವೆ-ಹಳೆೇ ಬಸ್ ನಿಲ್ದಾಣವರೆಗೆ

ನಾಲ್ಕು ಚಕ್ರ ವಾಹನ ನಿಲುಗಡೆ ನಿಷೇಧ

ಅರ್ಕಾವತಿ ಸೇತುವೆ ಅಂಚಿನಿಂದ ಹಳೇ ಬಸ್ ನಿಲ್ದಾಣದ ಸರ್ಕಲ್‌ನಲ್ಲಿ ಹಳೇ ಬಸ್ ನಿಲ್ದಾಣದ ಬಸವೇಶ್ವರ ದೇವಸ್ಥಾನ ಮುಂದೆ ಹೊರತುಪಡಿಸಿ ರಸ್ತೆ ಬಿಳಿ ಪಟ್ಟಿಯ ಒಳಗೆ ದ್ವಿ-ಚಕ್ರ ವಾಹನಗಳನ್ನು ವಾರದ ಎಲ್ಲ ದಿನಗಳು ನಿಲುಗಡೆ ಮಾಡಲಾಗಿದ್ದು, ನಾಲ್ಕು ಚಕ್ರ ವಾಹನ ನಿಲುಗಡೆ ನಿಷೇಧಿಸಲಾಗಿದೆ.

ಹಳೇ ಬಸ್ ನಿಲ್ದಾಣದ ಸಿಟಿ ಬಸ್ ನಿಲ್ದಾಣದಲ್ಲಿ ವಾರದ ಎಲ್ಲ ದಿನಗಳಲ್ಲಿ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನ ನಿಲುಗಡೆ ಮಾಡಬಹುದು. ಹಳೇ ಬಸ್ ನಿಲ್ದಾಣದ ಬಳಿ ಇರುವ ಅರಳಿ ಮರದಿಂದ ಪಿಎಲ್‌ಡಿ ಬ್ಯಾಂಕ್ ಕಡೆಗೆ ಹೋಗುವ ರಸ್ತೆ ಎಡ ಭಾಗದಲ್ಲಿ ದ್ವಿ-ಚಕ್ರ ವಾಹನ ನಿಲುಗಡೆ (ಆಸ್ಪತ್ರೆಯ ಕಾಂಪೌಂಡ್ ಕಡೆಗೆ) ಭಾನುವಾರ, ಸೋಮವಾರ, ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ, ಶನಿವಾರ (ವಾರದ ಎಲ್ಲ ದಿನ) ನಿಲುಗಡೆ ಮಾಡುವಂತೆ ನಾಲ್ಕು ಚಕ್ರ ವಾಹನ ನಿಲುಗಡೆ ನಿಷೇಧಿಸಿದೆ. ಹಳೇ ಬಸ್ ನಿಲ್ದಾಣದಿಂದ ಐಜೂರು ಸರ್ಕಲ್ ಕಡೆಗೆ 1ನೇ ಕ್ರಾಸ್‌ವರೆಗೂ ರಸ್ತೆಯ ಎರಡು ಬದಿಯಲ್ಲಿ ದ್ವಿ-ಚಕ್ರ ವಾಹನ ವಾರದ ಎಲ್ಲ ದಿನ ನಿಲುಗಡೆ ಮಾಡುವಂತೆ ನಾಲ್ಕು ಚಕ್ರ ವಾಹನ ನಿಲುಗಡೆ ನಿಷೇಧ, ನಂತರ 1ನೇ ಕ್ರಾಸ್‌ನಿಂದ ಐಜೂರು ಸರ್ಕಲ್ ಸಿಗ್ನಲ್‌ವರೆಗೂ ವಾಹನ ನಿಲುಗಡೆ ಸಂಪೂರ್ಣ ನಿಷೇಧಿಸಲಾಗಿದೆ.

ದ್ವಿಚಕ್ರವಾಹನಗಳಿಗೆ ಅವಕಾಶ

ಬೆನಕಾ ಬಜಾರ್ ರಸ್ತೆ ಎರಡು ಬದಿಯಲ್ಲಿ ದ್ವಿಚಕ್ರ ವಾಹನಗಳನ್ನು ವಾರದ ಎಲ್ಲ ದಿನ ನಿಲುಗಡೆ ಮಾಡುವಂತೆ ನಾಲ್ಕು ಚಕ್ರದ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಐಜೂರು ಸರ್ಕಲ್‌ನಿಂದ ಲಕ್ಷ್ಮೀ ವೆಂಕಟೇಶ್ವರ ಟ್ರೇಡರ್ಸ್‌ವರೆಗೂ (ಮಾಗಡಿ-ಜಾಲಮಂಗಲ ರಸ್ತೆ) ವಾರದ ಎಲ್ಲ ದಿನ ವಾಹನ ನಿಲುಗಡೆ ನಿಷೇಧಿಸಲಾಗಿದೆ.ಲಕ್ಷ್ಮೀ ವೆಂಕಟೇಶ್ವರ ಟ್ರೇಡರ್ಸ್‌ನಿಂದ ಕೆಂಪೇಗೌಡ ಸರ್ಕಲ್‌ವರೆಗೆ ವಾರದ ಎಲ್ಲ ದಿನ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಈ ರಸ್ತೆಯ ಕಡೆಗಳಲ್ಲಿ ವಾಹನ ನಿಲುಗಡೆ (ಪಾರ್ಕಿಂಗ್-ನೋ ಪಾರ್ಕಿಂಗ್) ಮಾಡಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net