ಎಂಡಿಎಂಎ ಸಾಗಾಟ ಆರೋಪಿ ಬಂಧನ

MDMA
Published on

ಕಾಸರಗೋಡು: ಮಾರಕ ಎಂಡಿಎಂಎ ಹೊಂದಿದ್ದ ಉಪ್ಪಳ ಕೋಡಿಬೈಲು ನಿವಾಸಿ ಮಹಮ್ಮದ್ ರಹೀಸ್(28) ಎಂಬಾತನನ್ನು ಮಂಜೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈತನಲ್ಲಿದ್ದ 2.53 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಉಪ್ಪಳ ಮಜಲ್ ಎಂಬಲ್ಲಿ ಅನುಮಾನಾಸ್ಪದ ರೀತಿಯಲ್ಲಿ ನಿಂತಿದ್ದ ಈತನನ್ನು ಗಸ್ತಿನಲ್ಲಿದ್ದ ಮಂಜೇಶ್ವರ ಠಾಣೆ ಎಸ್.ಐ. ರತೀಶ್ ನೇತೃತ್ವದ ಪೊಲೀಸರು ತಪಾಸಣೆ ನಡೆಸಿದಾಗ ಎಂಡಿಎಂಎ ಪತ್ತೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net