ಕೆಂಜಾರು ಗುಂಡೊಟ್ಟು ಧರ್ಮನೇಮಕ್ಕೆ ಚಪ್ಪರ ಮುಹೂರ್ತ

New Project (13)
Published on

ಗುರುಪುರ: ಕೆಂಜಾರುಗಂಡೊಟ್ಟು ಕುಟುಂಬಿಕರ ಸೇವಾ ರೂಪದಲ್ಲಿ ಏ.10ರಂದು ನಡೆಯಲಿರುವ ‘ಧರ್ಮನೇಮ’ದ ಚಪ್ಪರ ಮುಹೂರ್ತ ಇತ್ತೀಚೆಗೆ ನಡೆಯಿತು.

ಏ.10ರಂದು ಬೆಳಗ್ಗೆ 9 ಗಂಟೆಗೆ ತಾರಬರಿ ಜುಮಾದಿ ಬಂಟ ಪರಿವಾರ ದೈವಗಳ ಭಂಡಾರ ಆಗಮಿಸಿ ರಾತ್ರಿ 8.30ಕ್ಕೆ ಪ್ರಕಾಶ್ ಅಮ್ಮಣ್ಣಾಯ ಮಾರ್ಗದರ್ಶನದಲ್ಲಿ ಧರ್ಮನೇಮ ಜರುಗಲಿದೆ. ಅದೇ ದಿನ ಬೆಳಿಗ್ಗೆ ಕಲಶ ಪ್ರತಿಷ್ಠೆ, ನೂತನ ನಿರ್ಮಾಣದ ಚಾವಡಿಯಲ್ಲಿ ದೈವಗಳ ಪುನರ್ ಪ್ರತಿಷ್ಠೆ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಏ.8ರಂದು ಬೆಳಿಗ್ಗಿನಿಂದ ಹಲವು ಧಾರ್ಮಿಕ ವಿಧಿಗಳು, ಏ.9ರಂದು ಬೆಳಿಗ್ಗೆ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ.

ತೋಕೂರುಗುತ್ತು ದಿವಾಕರ ಆಳ್ವ, ತಾರಬರಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮೇಶ್ ಶೆಟ್ಟಿ ಚಿಕ್ಕಪರಾರಿ, ವಾಸು ಜೆ.ಸಾಲ್ಯಾನ್, ತಾರಬರಿ ದೈವಸ್ಥಾನ ಅರ್ಚಕ ಮಂಜು ಪೂಜಾರಿ ಭಂಡಾರಮನೆ, ಜಗನ್ನಾಥ ಸಾಲ್ಯಾನ್ ಕರಂಬಾರು, ಶ್ರೀಕರ ಶೆಟ್ಟಿ ತೋಕೂರುಗುತ್ತು, ನಿತಿನ್ ಶೆಟ್ಟಿ ಚಿಕ್ಕಪರಾರಿ, ಭಾಸ್ಕರ ಶೆಟ್ಟಿ, ಕೇಶವ ಶೆಟ್ಟಿ, ಗುಂಡೊಟ್ಟು ಸಂಜೀವ ಶೆಟ್ಟಿ, ಯೋಗೀಶ್ ಆಳ್ವ ಅಡ್ಕ, ರಾಕೇಶ್ ಮಡಿವಾಳ, 16 ಗುತ್ತುಮನೆತನ ಹಾಗೂ ಗುಂಡೊಟ್ಟುಮನೆ ರಾಮಣ್ಣ ಶೆಟ್ಟಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net