

ಬಾಗಲಕೋಟೆ : ಸಮಾಜ ಸೇವೆಯನ್ನೇ ತಮ್ಮ ಮೂಲ ಆಶಯವಾಗಿಸಿಕೊಂಡು, ಬಾಗಲಕೋಟೆ ಕ್ಷೇತ್ರದಲ್ಲಿ ಚಿರಪರಿಚಿತರಾದ ಮಲ್ಲಿಕಾರ್ಜುನ ಚರಂತಿಮಠ (ಎಂಸಿಸಿ) ಅವರು, ಈ ಕ್ಷೇತ್ರದ ಭವಿಷ್ಯದ ಯುವ ನಾಯಕರಾಗಿದ್ದಾರೆ. ಅವರ ಸಾಮಾಜಿಕ ಸೇವೆಗಳು ಇತರರಿಗೆ ಮಾದರಿಯಾಗಿವೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಬಸವರಾಜ ಕಟಗೇರಿ ಹೇಳಿದರು.
ಮಲ್ಲಿಕಾರ್ಜುನ ಚರಂತಿಮಠ ಅವರ ೫೩ನೇ ಜನ್ಮದಿನದ ಅಂಗವಾಗಿ ಶುಕ್ರವಾರ ನವನಗರದ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು-ಹಂಪಲು-ಬಿಸ್ಕತ್ ಹಾಗೂ ನಗರದ ಆಟೋ-ಟಂಟಂ ಚಾಲಕರಿಗೆ ಬಟ್ಟೆ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಕ್ಷೇತ್ರದಲ್ಲಿ ಸ್ವಾಭಿಮಾನಿ ಕಾರ್ಯಕರ್ತರ ಮುಂದಾಳತ್ವ ವಹಿಸಿ, ಕಾರ್ಯಕರ್ತರಿಗೆ ಗೌರವ ಸಿಗುವ ಕೆಲಸ ಮಾಡಿದ್ದಾರೆ. ಕಳೆದ ೨೯ ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ಇರುವ ಅವರು, ಈಗ ಚರಂತಿಮಠ ಮತ್ತು ವಸ್ತ್ರದ ಫೌಂಡೇಶನ ಮೂಲಕ ಸೇವೆಯನ್ನು ಮತ್ತಷ್ಟು ಇಮ್ಮಡಿಗೊಳಿಸಿದ್ದಾರೆ. ಬಾಗಲಕೋಟೆ ಕ್ಷೇತ್ರದ ಭವಿಷ್ಯದ ನಾಯಕರಾಗಿದ್ದಾರೆ ಎಂದರು.
ಕೋವಿಡ್, ಪ್ರವಾಹ ವೇಳೆ ಸಂಕಷ್ಟದಲ್ಲಿದ್ದ ಜನರಿಗೆ ಸಾಕಷ್ಟು ನೆರವು ನೀಡಿದ್ದಾರೆ. ಸಾಮಾಜಿಕ ಸೇವೆಯಿಂದಲೇ ಗುರುತಿಸಿಕೊಂಡಿರುವ ಅವರಿಗೆ ದೇವರು, ಆಯುಷ್ಯ-ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇವೆ ಎಂದರು.
ಹಣ್ಣು-ಬಟ್ಟೆ ವಿತರಣೆ :
ಮಲ್ಲಿಕಾರ್ಜುನ ಚರಂತಿಮಠ ಅವರ ಸ್ನೇಹಿತರು, ಬೆಂಬಲಿಗರು, ಅಭಿಮಾನಿಗಳು ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು. ಬಳಿಕ ಹಳೆಯ ಬಾಗಲಕೋಟೆಯ ಆಟೋ-ಟಂಟಂ ಚಾಲಕರಿಗೆ ಉಚಿತವಾಗಿ ಬಟ್ಟೆ ವಿತರಿಸಲಾಯಿತು. ಕಾಮಧೇನು ಸಂಸ್ಥೆಯ ಮುಖಂಡ ವಿಜಯ ಸುಲಾಖೆ, ಪ್ರಮುಖರಾದ ಗುರು ಅನಗವಾಡಿ, ಅರುಣ ಲೋಕಾಪುರ, ರಾಜು ಗೌಳಿ, ಶೈಲೂ ಅಂಗಡಿ, ಬಸವರಾಜ ಕಳಸಾ, ರಾಜು ಬಾಸೂತಕರ್, ಬಸವರಾಜ ಪಾತ್ರೋಟಿ, ಯಲ್ಲಪ್ಪ ಜಾಲಗಾರ, ಬಸವರಾಜ ನೀಲನಾಯಕ, ವಿನಾಯಕ ಹಾಸಲಕರ, ಬೊಮ್ಮಣ್ಣ ಮಮದಾಪುರ ಇತರರು ಇದ್ದರು.