

ಯಲಬುರ್ಗಾ: ಪಾಲಕರು ಮಕ್ಕಳನ್ನು ತಪ್ಪದೆ ಸರ್ಕಾರಿ ಶಾಲೆಗೆ ದಾಖಲಿಸಿ ಉತ್ತಮ ಶಿಕ್ಷಣ ಕಲ್ಪಿಸಬೇಕೆಂದು ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಹೆಗಡೆ ಹೇಳಿದರು.
ಇದನ್ನೂ ಓದಿ:ಇಟಗಿ ಸಹಿಪ್ರಾ ಶಾಲೆ ಉನ್ನತೀಕರಿಸುವ ಭರವಸೆ
ತಾಲೂಕಿನ ಬಂಡಿಹಾಳ ಗ್ರಾಮದ ಸಕಿಪ್ರಾ ಶಾಲೆ ಹಾಗೂ ಸಹಿಪ್ರಾ ಶಾಲೆಯಿಂದ ಗುರುವಾರ ಹಮ್ಮಿಕೊಂಡಿದ್ದ ದಾಖಲಾತಿ ಆಂದೋಲನ ಹಾಗೂ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರ ಮಕ್ಕಳ ಶಿಕ್ಷಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಉತ್ತಮ ಶಿಕ್ಷಣ ನೀಡುತ್ತಿದ್ದು. ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಪ್ರಮುಖರಾದ ರಾಜು ನಿಡಗುಂದಿ, ಬಸವರಾಜ ಕಳಸಪ್ಪನವರ, ಬಸವರಾಜ ಮುಗಳಿ, ಯಮನೂರಸಾಬ್, ಶರಣು ನಾಗರಾಳ, ಹನುಮಂತ ಪೂಜಾರ್ ಇತರರಿದ್ದರು.