More

    ಇಟಗಿ ಸಹಿಪ್ರಾ ಶಾಲೆ ಉನ್ನತೀಕರಿಸುವ ಭರವಸೆ

    ಕಂಪ್ಲಿ: ನಂ.1ಇಟಗಿ ಗ್ರಾಮದ ಸಹಿಪ್ರಾ ಶಾಲೆಯನ್ನು ಪ್ರೌಢಶಾಲೆಯನ್ನಾಗಿ ಉನ್ನತೀಕರಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.

    ತಾಲೂಕಿನ ನಂ.1ಇಟಗಿ ಗ್ರಾಮದ ಸಹಿಪ್ರಾ ಶಾಲೆಯಲ್ಲಿ 13.90ಲಕ್ಷ ರೂ. ವೆಚ್ಚದಲ್ಲಿ ವಿವೇಕ ಯೋಜನೆಯಡಿ ಶಾಲೆಕಟ್ಟಡ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಬಾಲಕಿಯರು ಪ್ರೌಢಶಾಲೆ ಶಿಕ್ಷಣದಿಂದ ವಂಚಿತರಾಗಬಾರದು. ಗ್ರಾಮಕ್ಕೆ ಪ್ರೌಢಶಾಲೆ ಅಗತ್ಯವಿದ್ದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಸಮೃದ್ಧ ಮಳೆ, ಬೆಳೆಗಾಗಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿ ಎನ್ನುವ ಸಂಕಲ್ಪದೊಂದಿಗೆ ಕಂಪ್ಲಿಯ ಶ್ರೀಪೇಟೆ ಬಸವೇಶ್ವರ ದೇವಸ್ಥಾನದಿಂದ ಕುರುಗೋಡು ದೊಡ್ಡಬಸವೇಶ್ವರ ಕ್ಷೇತ್ರಕ್ಕೆ ಮಂಗಳವಾರ ಬೆಳಗ್ಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾಗಿ ತಿಳಿಸಿದರು.

    ಮುಖ್ಯಶಿಕ್ಷಕ ಚಂದ್ರಯ್ಯ ಶಾಲೆಗೆ ಆವರಣಗೋಡೆ ನಿರ್ಮಾಣ, ಸ್ಮಾರ್ಟ್ ಟಿವಿ, ಆಟದ ಮೈದಾನ, ಶಾಲೆ ಉನ್ನತೀಕರಿಸುವಂತೆ ಮನವಿ ಸಲ್ಲಿಸಿದರು. ಪ್ರಮುಖರಾದ ಓ.ಪಿ.ದಾದಾಖಲಂದರ್, ನಿಟ್ಟೂರು ಸುರೇಶ್, ಚನ್ನಯ್ಯಸ್ವಾಮಿ, ಪಿಡಿಒ ಎಚ್.ಶೇಷಗಿರಿ, ಕಾರ್ಯದರ್ಶಿ ದೊಡ್ಡ ಬಸಪ್ಪ, ಮುಖ್ಯಶಿಕ್ಷಕ ಎ.ಚಂದ್ರು, ಎಚ್.ಪಂಪಾಪತಿ, ಎಸ್‌ಡಿಎಂಸಿ ಅಧ್ಯಕ್ಷ ಭೀಮಪ್ಪ, ಸಣಾಪುರ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀದೇವಿ, ಸದಸ್ಯ ಜಿ.ಭಾಸ್ಕರರೆಡ್ಡಿ, ವೆಂಕಟೇಶ್, ಸವಿತಾ ನಾಗರಾಜ, ಎಸ್‌ಡಿಎಂಸಿ ಅಧ್ಯಕ್ಷ ಹೊನ್ನೂರಸ್ವಾಮಿ, ಮುಖ್ಯಶಿಕ್ಷಕ ಎಫ್.ಇಮಾಂಸಾಬ್, ಗುತ್ತಿಗೆದಾರ ಎಚ್.ಹೊನ್ನೂರಪ್ಪ, ನೆಲ್ಲೂಡಿ ಗ್ರಾಪಂ ಅಧ್ಯಕ್ಷ ಎಲ್.ಶ್ರೀನಿವಾಸ್, ಪ್ರಮುಖರಾದ ಲಕ್ಷ್ಮೀನಾರಾಯಣ, ಎ.ಮಲ್ಲಿಕಾರ್ಜುನ, ನಾರಾಯಣಸ್ವಾಮಿ ಇತರರಿದ್ದರು. ಕಂಪ್ಲಿ ತಾಲೂಕಿನ ನಾನಾ ಕಡೆಗಳಲ್ಲಿ 1.12ಕೋಟಿ ರೂ.ವೆಚ್ಚ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts