More

    ಪಟ್ಟದ ದೇವರ ಪೂಜಾ ಮಹೋತ್ಸವ

    ಕಂಪ್ಲಿ: ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಶ್ರೀವಸಿಗೇರಪ್ಪಸ್ವಾಮಿ ಮತ್ತು ವದ್ದಟ್ಟೆಪ್ಪಸ್ವಾಮಿ ಪಟ್ಟದ ದೇವರ ಪೂಜಾ ಮಹೋತ್ಸವ ಶುಕ್ರವಾರ ಶ್ರದ್ಧೆ-ಭಕ್ತಿಯಿಂದ ಜರುಗಿತು. ಈ ನಿಮಿತ್ತ ಏರ್ಪಡಿಸಿದ್ದ ಸಾಮೂಹಿಕ ವಿವಾಹದಲ್ಲಿ 12 ನವಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

    ಹಾಲುಮತ ಸಮಾಜದ ಗುರುಗಳಾದ ಶ್ರೀ ರೋಹಿತಯ್ಯಸ್ವಾಮಿ ಒಡೆಯರ್, ಶ್ರೀ ಗುರುಲಿಂಗಯ್ಯಸ್ವಾಮಿ ಒಡೆಯರ್, ಶ್ರೀ ಜಡೆಯಪ್ಪಸ್ವಾಮಿ ಒಡೆಯರ್, ಶ್ರೀ ಗುರುಪಾದಸ್ವಾಮಿ ಒಡೆಯರ್, ಶ್ರೀ ವಿರೂಪಾಕ್ಷಯ್ಯಸ್ವಾಮಿ ಒಡೆಯರ್ ಸಾನ್ನಿಧ್ಯದಲ್ಲಿ ಮಲ್ಲೇಲೋರ ಗೋತ್ರದ ಕುಟುಂಬದವರ ಪಟ್ಟ ಏರುವ ಕಾರ್ಯಕ್ರಮ, ಪಂಜಿನ ಆಟ, ಕಾಮಕ್ಕ ಮತ್ತು ಬೀರಪ್ಪನ ಆಟ, ಭಂಡಾರ ಒಡೆಯುವ ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

    ದೇವಲಾಪುರದ ಶ್ರೀ ಗುರು ವಸಿಗೇರಪ್ಪಸ್ವಾಮಿ, ಶ್ರೀ ಮಲ್ಲೇಶ್ವರಸ್ವಾಮಿ, ಶ್ರೀನಿಲಿಗಿರಿ ಮಾನ್ಯಸ್ವಾಮಿ, ಶ್ರೀಹಿರಲಿಂಗೇಶ್ವರಸ್ವಾಮಿ, ಶ್ರೀಬೀರಲಿಂಗೇಶ್ವರಸ್ವಾಮಿ, ಸೋಮಲಾಪುರದ ಶ್ರೀಗುರು ಸಿದ್ದೇಶ್ವರಸ್ವಾಮಿ, ಶ್ರೀವದ್ದಟ್ಟೆಪ್ಪಸ್ವಾಮಿ, ಗುತ್ತಿಗೆನೂರಿನ ಶ್ರೀಗುರುಸಿದ್ದೇಶ್ವರಸ್ವಾಮಿ, ಶ್ರೀಚೌಡಕಯ್ಯ, ಓರಬಾಯಿಯ ಶ್ರೀ ರೇವಣಸಿದ್ದೇಶ್ವರಸ್ವಾಮಿ ದೇವರು ಪಾಲ್ಗೊಂಡಿದ್ದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts