More

    ಹಂಪಿ ಸಾವಿರದೇವರ ಮಠ ಆತ್ಮೋದ್ಧಾರದ ಕೇಂದ್ರ; ಶ್ರೀವಾಮದೇವ ಶಿವಾಚಾರ್ಯರ ಆಶೀರ್ವಚನ

    ಕಂಪ್ಲಿ: ದೇವರನ್ನು ಹುಡುಕುವುದಕ್ಕಿಂತ ಸ್ವತಃ ದೇವರಾಗಬೇಕು. ಅರಿವಿನ ಜ್ಞಾನೋದಯದಿಂದ ಸ್ವತಃ ದೇವರಾಗಲು ಸಾಧ್ಯ ಎಂದು ಎಮ್ಮಿಗನೂರಿನ ಹಂಪಿ ಸಾವಿರದೇವರ ಮಠದ ಶ್ರೀವಾಮದೇವ ಶಿವಾಚಾರ್ಯರು ಹೇಳಿದರು.

    ತಾಲೂಕಿನ ಎಮ್ಮಿಗನೂರು ಹಂಪಿಸಾವಿರದೇವರ ಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರೀ ವಾಮದೇವ ಶಿವಾಚಾರ್ಯರ 52ನೇ ಗುರುವಂದನೆ ಸಮಾರಂಭದಲ್ಲಿ ಮಾತನಾಡಿದರು.

    ಅರಿವಿನ ಜ್ಞಾನೋದಯವನ್ನು ಗುರು ಮುಖೇನ ಅರಿತುಕೊಳ್ಳಬೇಕು. ಮಾಯ ಮೋಹದಿಂದ ವಿಮುಖನಾಗಿ ಪರಮ ತ್ಯಾಗ, ಅಹಿಂಸೆ, ಮೌನ ಮತ್ತು ನಿಸ್ವಾರ್ಥ ಸ್ವೀಕಾರ ಮನೋಭಾವನೆಗಳಿಂದ ದೇವರಾಗಲು ಸಾಧ್ಯ. ಎಮ್ಮಿಗನೂರಿನ ಸಿದ್ಧಲಿಂಗಶ್ರೀಗಳ ಸಂಕಲ್ಪದಿಂದ ಹಂಪಿ ಸಾವಿರದೇವರ ಮಠವು ಯಾವುದೇ ಜಾತಿ, ಮತ, ಪಂಥಗಳಿಗೆ ಅಂಟಿಕೊಳ್ಳದೆ ಆತ್ಮೋದ್ಧಾರದ ಕೇಂದ್ರವಾಗಿದೆ. ವೀರಶೈವ ಎಂಬುದು ಜಾತಿಯಲ್ಲ. ಬದಲಿಗೆ ಜೀವ ಮತ್ತು ಶಿವನಲ್ಲಿ ಒಂದಾಗುವ ವಿದ್ಯೆಯಲ್ಲಿ ವೀರನಾಗುವವನೇ ವೀರಶೈವನಾಗಿದ್ದಾನೆ ಎಂದರು.

    ಮಸ್ಕಿಯ ಶ್ರೀ ವರರುದ್ರಮುನಿ ಶಿವಾಚಾರ್ಯರು ಸಾನ್ನಿಧ್ಯವಹಿಸಿ ಮಾತನಾಡಿ, ದೇವರ ಸಾಕ್ಷಾತ್ಕಾರಕ್ಕೆ ಗುರುವಿನ ಕೃಪೆ ಅಗತ್ಯ. ಅನನ್ಯ ನಂಬಿಕೆಯ ಶುದ್ಧ, ನಿಷ್ಕಲ್ಮಶ ಭಕ್ತಿ ಮತ್ತು ಸೇವೆಯನ್ನು ಗುರುವಿಗೆ ಸಲ್ಲಿಸುವುದು ಭಕ್ತನ ಅತ್ಯಂತ ಶ್ರೇಷ್ಠ ಸೇವೆಯಾಗಿದೆ ಎಂದರು. ಬಳ್ಳಾರಿಯ ವಾಮದೇವ ಕಲಾಟ್ರಸ್ಟ್ ಕಲಾವಿದರು ಸಂಗೀತ ಸೇವೆ ಸಲ್ಲಿಸಿದರು.

    ಎಚ್.ವೀರಾಪುರದ ಜಡೇಶತಾತ ಸಾನ್ನಿಧ್ಯ ವಹಿಸಿದ್ದರು. ಮಠದ ಸದ್ಭಕ್ತರಾದ ಬಜಾರ ಬಸವರಾಜ, ಬಿ.ಸದಾಶಿವಪ್ಪ, ಬೇರ‌್ಗಿ ಮಹೇಶಗೌಡ, ಮಸೀದಿಪುರದ ಸಿದ್ಧರಾಮಗೌಡ, ವಕೀಲ ಹುಡೇದ ಬಸವರಾಜಗೌಡ, ನೆಲ್ಲೂಡಿ ಕರಿಬಸವನಗೌಡ, ಬಾದ್ನಟ್ಟಿ ತಿಮ್ಮಪ್ಪ, ಚಿತ್ರದುರ್ಗದ ಹಾಸ್ಯಸಾಹಿತಿ ಜಗನ್ನಾಥ, ಎಸ್.ರಾಮಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts