More

    ರಸ್ತೆ ಮೇಲೆಯೇ ಹರಿಯುವ ಕೊಳಚೆ -ಸಾಂಕ್ರಾಮಿಕ ರೋಗದ ಭೀತಿ

    ಕಂಪ್ಲಿ: ತಾಲೂಕಿನ ಹಂಪಾದೇವನಹಳ್ಳಿ ಗ್ರಾಪಂ ವ್ಯಾಪ್ತಿಗೆ ಒಳಪಡುವ ಚಿಕ್ಕಜಾಯಿಗನೂರು ಗ್ರಾಮದಲ್ಲಿ ಸಿಸಿ ರಸ್ತೆ ಮೇಲೆಯೇ ಚರಂಡಿ ನೀರು ಹರಿಯುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಗ್ರಾಮಸ್ಥರನ್ನು ಕಾಡುತ್ತಿದೆ.

    ಇದನ್ನೂ ಓದಿ: ಸಾಂಕ್ರಾಮಿಕ ರೋಗ ತಡೆಗೆ ಸಹಕರಿಸಿ

    ಗ್ರಾಮದ 2ನೇವಾರ್ಡ್‌ನ ವೆಂಕಟೇಶ್ವರ ದೇವಸ್ಥಾನ ಬಳಿಯ ಹಳೇ ಮಾಗಾಣಿ ರಸ್ತೆ ಬಳಿ ಚರಂಡಿ ಅರ್ಧಕ್ಕೆ ನಿರ್ಮಿಸಿದ್ದರಿಂದ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ದುರ್ನಾತ ಬೀರುತ್ತಿದೆ. ಸೊಳ್ಳೆ, ನೊಣ, ಕ್ರಿಮಿಕೀಟಗಳ ಹಾವಳಿ ಹೆಚ್ಚಿದೆ. ಇದರ ನಡುವೆ ಜನರು ಓಡಾಡಬೇಕಾಗಿದೆ.

    ಈ ರಸ್ತೆ ನೆಲ್ಲೂಡಿ ಮತ್ತು ಕುರುಗೋಡಿಗೆ ಸೇರುವ ಜಿಲ್ಲಾ ಮುಖ್ಯ ಜೋಡು(ಲಿಂಕ್)ರಸ್ತೆಯಾಗಿದೆ. ಕೆಂಚಮ್ಮಗುಡಿಯಿಂದ ಮರಿಯಪ್ಪನ ಮನೆತನಕ ಮಾತ್ರ ಚರಂಡಿ ನಿರ್ಮಿಸಿದ್ದು ಮುಂದೆ ನಿರ್ಮಿಸಿಲ್ಲ. ಚರಂಡಿ ನಿರ್ಮಾಣಕ್ಕೆ ಮೂರು ವರ್ಷಗಳಿಂದ ಗ್ರಾಪಂ ಅಧಿಕಾರಿಗಳನ್ನು ಒತ್ತಾಯಿಸಲಾಗುತ್ತಿದೆ.

    ಈಗಾದರೂ ಚರಂಡಿ ನಿರ್ಮಿಸಬೇಕು. ರಸ್ತೆಯನ್ನು ಸಮತಟ್ಟು ಮಾಡಿ ಅಭಿವೃದ್ಧಿಗೊಳಿಸಬೇಕು ಎಂದು ಸ್ಥಳೀಯರಾದ ದಾಸರ ಬದುಕಪ್ಪ, ದಾಸರ ಮರಿಯಣ್ಣ, ರಾಮಣ್ಣ ದಾಸರ, ಮರೆಣ್ಣ, ಶೇಷಪ್ಪ, ಸರಸ್ವತೆಮ್ಮ ಇತರರು ಆಗ್ರಹಿಸಿದ್ದಾರೆ.

    ಚರಂಡಿ ನಿರ್ಮಾಣಕ್ಕೆ 20 ಲಕ್ಷ ರೂ. ಮಂಜೂರಾಗಿದೆ. ಆದರೆ, ಜನರ ಸಹಕಾರ ಇಲ್ಲದಿದ್ದರಿಂದ ಚರಂಡಿ ನಿರ್ಮಾಣ ಕಾರ್ಯಕ್ಕೆ ಅಡ್ಡಿಯಾಗಿದೆ. ಜನರು ಸಹಕಾರ ನೀಡಿದಲ್ಲಿ ಚರಂಡಿ ನಿರ್ಮಿಸಲಾಗುವುದು. ಆಗಾಗ್ಗೆ ಚರಂಡಿ ಸ್ವಚ್ಛಗೊಳಿಸಿ, ಬ್ಲೀಚಿಂಗ್ ಪೌಡರ್ ಸಿಂಪಡಿಸಲಾಗುತ್ತಿದೆ.
    | ಬೀರಲಿಂಗ, ಪಿಡಿಒ, ಹಂಪಾದೇವನಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts