

ಮುರಗೋಡ: ಜನಸಾಮಾನ್ಯರ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆ ಜಾರಿಗೊಳಿಸಿದ್ದು, ಜನರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ಗ್ರಾಮದಲ್ಲಿ ತಾಲೂಕಾಡಳಿತ, ತಾಪಂ ಹಾಗೂ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕುಟ್ಟರನಟ್ಟಿ ನೂತನ ಕಂದಾಯ ಗ್ರಾಮದ ಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಮಾತನಾಡಿ, ಕಂದಾಯ ಇಲಾಖೆ ನಿಮ್ಮ ಮನೆ ಬಾಗಿಲಿಗೆ ಸೌಲಭ್ಯ ಒದಗಿಸಲಿದ್ದು, ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ತಾಪಂ ಇಒ ಆನಂದ ಬಡಕುಂದ್ರಿ, ಉಪತಹಸಿಲ್ದಾರ್ ಡಿ.ಬಿ.ಅಲ್ಲಯ್ಯನವರಮಠ, ಕಂದಾಯ ನಿರೀಕ ಬಿ.ಬಿ.ಬಡಗಾವಿ, ಗ್ರಾಪಂ ಅಧ್ಯ ದೀಪಾ ಬಂಡಿವಡ್ಡರ, ಉಪಾಧ್ಯ ಶಿವರಾಜ ರುದ್ರಪ್ಪನವರ, ಗ್ರಾಮ ಆಡಳಿತಾಧಿಕಾರಿ ದೀಪಾ ಕೊಪ್ಪಳ, ಪಿಡಿಒ ಗುರುಪಾದ ಗಿರನ್ನವರ, ಗ್ರಾಪಂ ಸದಸ್ಯರಾದ ಆನಂದ ಪಾಟೀಲ, ಲಕ್ಷ$್ಮಣ ಕುಂಟಮ್ಮಯಣ್ಣವರ, ಕರಿಯಪ್ಪ ಪೆಂಡಾರಿ, ಶಿವನಪ್ಪ ಒಡವಡಿ, ಯಲ್ಲಪ್ಪ ನಾಯ್ಕರ, ಐ.ಆರ್.ಕಾಜಗಾರ ಇತರರಿದ್ದರು.