

ಕಿಕ್ಕೇರಿ: ಅಂಗವಿಕಲರಿಗೆ ಬೇಕಿರುವುದು ಅನುಕಂಪವಲ್ಲ. ಹೀಗಾಗಿ ಅವರನ್ನು ಪ್ರೋತ್ಸಾಹಿಸಿ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕಿದೆ ಎಂದು ಕುರುಹಿನಶೆಟ್ಟಿ ಸಮಾಜದ ಅಧ್ಯಕ್ಷ ಸೂರ್ಯನಾರಾಯಣ ತಿಳಿಸಿದರು.
ಇಲ್ಲಿನ ಕುರುಹಿನಶೆಟ್ಟಿ ಸಮುದಾಯಭವನದಲ್ಲಿ ಗುರುವಾರ ಶ್ರೀ ರಮಣ ಮಹರ್ಷಿ ಅಕಾಡೆಮಿ ಫಾರ್ ದಿ ಬ್ಲೈಂಡ್ ಹಾಗೂ ತಾಲೂಕು ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ಅಂಗವಿಕಲ ಮಕ್ಕಳ ಕ್ರೀಡಾಕೂಟ ಮತ್ತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ಅಂಗವಿಕಲರಿಗೆ ಸವಲತ್ತು ಪ್ರಾಮಾಣಿಕವಾಗಿ ಸಿಗಬೇಕು. ಸಾಧಕ ವ್ಯಕ್ತಿಗಳ ಪರಿಚಯವನ್ನು ಅಂಗವಿಕಲರಿಗೆ ಶಾಲೆಗಳಲ್ಲಿ ತಿಳಿಸಿ ಹುರಿದುಂಬಿಸಿದರೆ, ಮುಂದಿನ ದಿನದಲ್ಲಿ ದೈತ್ಯ ಪ್ರತಿಭೆಗಳಾಗಿ ದೇಶದ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ಬೆಳಗಲಿದ್ದಾರೆ ಎಂದರು.
ವಿಕಲಚೇತನರ ಸಂಘದ ತಾಲೂಕು ಅಧ್ಯಕ್ಷ ಲಿಂಗರಾಜೇಗೌಡ ಮಾತನಾಡಿ, ಉದ್ಯೋಗ, ಶಿಕ್ಷಣದಲ್ಲಿ ಹೆಚ್ಚಿನ ಸವಲತ್ತು ನೀಡುತ್ತಿದ್ದು, ಸದ್ಭಳಕೆ ಮಾಡಿಕೊಳ್ಳಲು ಅರಿವು ಮೂಡಿಸುವ ಕೆಲಸ ಆಗಬೇಕಿದೆ. ವಿದ್ಯಾರ್ಥಿಗಳಲ್ಲಿ ಸಾಧನೆ, ಸಹಾಯ ಮಾಡುವಂತಹ ಕೆಲಸದ ಕುರಿತು ಜಾಗೃತಿ ಮೂಡಿಸಲು ಎಲ್ಲರೂ ಮುಂದಾಗಬೇಕೆಂದು ಮನವಿ ಮಾಡಿದರು.
ಅಂಗವಿಕಲ ಮಕ್ಕಳಿಗೆ ವಿವಿಧ ಕ್ರೀಡಾಕೂಟ ಏರ್ಪಡಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ರಮಣ ಮಹರ್ಷಿ ತಾಲೂಕು ಸಂಯೋಜಕ ಎಚ್.ಎನ್.ಪ್ರತಾಪ್, ಸ್ವಯಂ ಸೇವಕರಾದ ಭವ್ಯಾ, ಜಲೇಂದ್ರ ವಸಂತ, ನಾಗರತ್ನಾ, ಲಕ್ಷ್ಮೀದೇವಿ, ಎಂ.ಡಿ.ಯೋಗೇಂದ್ರ, ರಾಜಶೇಖರ, ಶಿಕ್ಷಕ ಮಂಜುನಾಥ್, ಸುರೇಶ್, ಭಾರತಿ, ಎಚ್.ಎನ್.ಮಂಜೇಗೌಡ, ಜೇಟುಸಿಂಗ್, ವಾಸು, ಶ್ರೀಕಾಂತ್ ಮತ್ತಿತರರಿದ್ದರು.