ಯುವ ಮನಸ್ಸುಗಳ ಬೆಸುಗೆ ಸದೃಢವಾಗಿ ಬಲಗೊಳ್ಳಲಿ ಸಂಘಟನೆ

kreedakoota
ಪ್ರಪ್ರಥಮ ಯುವ ಸಮಾವೇಶ ಯುವ ಬಾಂಧವ್ಯ-2025 ಅಂಗವಾಗಿ ನಡೆದ ಕ್ರೀಡಾಕೂಟವನ್ನು ಸುಬ್ರಹ್ಮಣ್ಯ ಉಡುಪ ಉದ್ಘಾಟಿಸಿದರು.
Published on

ಕುಂದಾಪುರ: ಬ್ರಾಹ್ಮಣ ಸಂಘಟನೆಯನ್ನು ಬಲಗೊಳಿಸುವ ಆಶಯದೊಂದಿಗೆ ಯುವ ಮನಸುಗಳನ್ನು ಬೆಸೆಯುವ ಸದುದ್ದೇಶದಿಂದ ಆಯೋಜಿಸಿದ ಯುವ ಬಾಂಧವ್ಯ ಪ್ರಥಮ ಜಿಲ್ಲಾ ಯುವ ಸಮಾವೇಶ ನಿಜಕ್ಕೂ ಯುವ ಜನಾಂಗವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಯುವ ಮನಸುಗಳ ಬೆಸುಗೆ ಭವಿಷ್ಯದಲ್ಲೂ ಸದೃಢವಾಗುಳಿದು ಸಂಘಟನೆ ಬಲಗೊಳ್ಳಲಿ ಎಂದು ದ್ರಾವಿಡ ಬ್ರಾಹ್ಮಣ ಪರಿಷತ್ ಗುಡ್ಡಟ್ಟು ವಲಯಾಧ್ಯಕ್ಷ ಸುಬ್ರಹ್ಮಣ್ಯ ಉಡುಪ ಹೇಳಿದರು.

ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಮತ್ತು ಉಡುಪಿ ಜಿಲ್ಲಾ ಯುವ ವಿಪ್ರ ವೇದಿಕೆಗಳು ಆಶ್ರಯದಲ್ಲಿ ಬಿದ್ಕಲ್‌ಕಟ್ಟೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ವಠಾರದಲ್ಲಿ ಆಯೋಜಿಸಲಾಗಿರುವ ಪ್ರಪ್ರಥಮ ಯುವ ಸಮಾವೇಶ ಯುವ ಬಾಂಧವ್ಯ-2025 ಅಂಗವಾಗಿ ಕ್ರೀಡಾಕೂಟವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಯುವ ವಿಪ್ರ ವೇದಿಕೆ ಅಧ್ಯಕ್ಷೆ ಪವಿತ್ರಾ ಅಡಿಗ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಬ್ರಾಹ್ಮಣ ಮಹಾಸಭಾದ ಗೌರವಾಧ್ಯಕ್ಷ ವೈ.ಸುಧಾಕರ ಭಟ್ ಶುಭಾಶಂಸನೆಗೈದರು. ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಕೃಷ್ಣಾನಂದ ಚಾತ್ರ, ಕಾರ್ಯದರ್ಶಿ ವಾದಿರಾಜ್ ಹೆಬ್ಬಾರ್, ವಿಪ್ರವಾಣಿ ಸಂಪಾದಕ ಪ್ರೊ.ಶಂಕರ್ ರಾವ್ ಕಾಳಾವರ, ಗುಡ್ಡಟ್ಟು ವಲಯ ಕಾರ್ಯದರ್ಶಿ ಶ್ರೀಧರ ಉಡುಪ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಸಂಚಾಲಕಿ ಶಾಂತಾ ಗಣೇಶ್, ಗುಡ್ಡಟ್ಟು ವಲಯ ಮಹಿಳಾ ವೇದಿಕೆ ಅಧ್ಯಕ್ಷೆ ಶೈಲಜಾ ಹೆಬ್ಬಾರ್, ವಲಯ ಯುವವಿಪ್ರ ವೇದಿಕೆ ಅಧ್ಯಕ್ಷ ವಿಷ್ಣು ಭಟ್, ಜಿಲ್ಲಾ ಕಾರ್ಯದರ್ಶಿ ಕಿರಣ್ ಭಟ್, ಜಿಲ್ಲಾ ಮಹಾಸಭಾ ಯುವಬಾಂಧವ್ಯ ಕಾರ್ಯದರ್ಶಿ ಅಕ್ಷತಾ ಗಿರೀಶ್, ತಾಲೂಕು ಪರಿಷತ್ ಮಾಜಿ ಕಾರ್ಯದರ್ಶಿ ರತ್ನಾಕರ ಉಡುಪ, ಜಿಲ್ಲಾ ಬ್ರಾಹ್ಮಣ ಮಹಾಸಭಾ ಕಾರ್ಯದರ್ಶಿ ಗಣೇಶ್ ರಾವ್ ಕುಂಭಾಶಿ, ಕೌಶಿಕ್ ಯಡಿಯಾಳ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net