ಆಧುನಿಕ ಯುಗದಲ್ಲಿ ಬ್ಯಾಂಕಿಂಗ್​ ಸೇವೆ ಹೆಚ್ಚಾಗಲಿ

charan
Published on

ಬೆಂಗಳೂರು: ಆಧುನಿಕ ಯುಗದಲ್ಲಿ ಬ್ಯಾಂಕಿಂಗ್​ ಸೇವೆ ಹೆಚ್ಚಾಗಬೇಕು. ಉತ್ತಮ ಬೆಳವಣಿಗೆ ಮೂಲಕ ಸಮಾಜಕ್ಕೆ ಅತ್ಯುತ್ತಮ ಸೇವೆ ನೀಡುವಂತಾಗಬೇಕು ಎಂದು ಹೈಕೋರ್ಟ್​ನ ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ಪಿ.ಎಸ್​.ದಿನೇಶ್​ ಕುಮಾರ್​ ಹೇಳಿದ್ದಾರೆ.

ಸಹಕಾರಿನಗರ ಸಮೀಪ ಕೊಡಿಗೆಹಳ್ಳಿಯಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂತನ ಸಹಕಾರ ಬ್ಯಾಂಕ್​ ಉದ್ಘಾಟಿಸಿ ಮಾತನಾಡಿದರು.

ಬ್ಯಾಂಕ್​ ಎಂಬುದು ನಂಬಿಕೆ ಇದ್ದಂತೆ. ಆ ನಂಬಿಕೆ ಬಂದಲ್ಲಿ ಮಾತ್ರ ಬ್ಯಾಂಕಿನ ಬೆಳವಣಿಗೆಯಾಗಲು ಸಾಧ್ಯ. ಜತೆಗೆ, ಸುಭದ್ರವಾಗಿ ಹಣವನ್ನು ಠೇವಣಿ ಇಡುವ ಕುರಿತು ನಂಬಿಕೆ ಬಂದರೆ ಬ್ಯಾಂಕಿನ ಘನತೆ ಹೆಚ್ಚಾಗುತ್ತದೆ. ಬ್ಯಾಂಕ್​ಗಳು ಗ್ರಾಹಕರ ನಂಬಿಕೆ ಉಳಿಸಿಕೊಳ್ಳಬೇಕು. ಬ್ಯಾಂಕ್​ಗಳು ಹೆಚ್ಚು ಶಾಖೆಗಳು ತೆರೆದರೆ ಆರ್ಥಿಕ ಚಟುವಟಿಕೆ ವೃದ್ಧಿಯಾಗುತ್ತದೆ ಎಂದರು.

ಹಿರಿಯ ಪತ್ರಕರ್ತ ಎಚ್​.ಆರ್​. ರಂಗನಾಥ್​ ಮಾತನಾಡಿ, ಸತ್ಯ, ಧರ್ಮದಿಂದ ಕೆಲಸ ಮಾಡುವುದು ಕಷ್ಟ. ಬ್ಯಾಂಕಿಂಗ್​ ವಲಯಕ್ಕೆ ನಂಬಿಕೆಯೇ ಅತಿ ದೊಡ್ಡ ಕೊರತೆ ಇದೆ. ಸಹಕಾರಿ ಬ್ಯಾಂಕಿಂಗ್​ ವಲಯದಲ್ಲಿ ಏನು ನಡೆಯಬಾರದು ಎಂದುಕೊಂಡಿದ್ದೇವೆಯೋ ಅದೆಲ್ಲವೂ ನಡೆದುಹೋಗಿದೆ. ಬ್ಯಾಂಕ್​ನಲ್ಲಿ ಹಣ ಇಡುವವರು ಕಟ್ಟಪಟ್ಟು ದುಡಿದಿರುತ್ತಾರೆ ಎಂಬುದನ್ನು ಮರೆಯಬಾರದು ಎಂದು ತಿಳಿಸಿದರು. ಶ್ರೀ ಚರಣ್​ ಸೌಹಾರ್ದ ಕೋ ಆಪರೇಟೀವ್​ ಬ್ಯಾಂಕ್​ ಸ್ಥಾಪಕ ಬಿ.ವಿ. ದ್ವಾರಕಾನಾಥ್​, ಗಾಯಾತ್ರಿ ದ್ವಾರಕಾನಾಥ್​, ನಿರ್ದೇಶಕ ಎಂ.ಗೋಪಿನಾಥ್​, ಉಪಾಧ್ಯ ಶುಭಪ್ರದ, ಹಿರಿಯ ವ್ಯವಸ್ಥಾಪಕ ಟಿ.ಎನ್​. ಗೀತಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net