

ರಾಮದುರ್ಗ: ಮಹಿಳಾ ದಿನಾಚರಣೆ ಹೆಸರಿಗಷ್ಟೇ ಆಚರಿಸಿದರೆ ಸಾಲದು. ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ ಸತ್ಕರಿಸಿ ಪ್ರೋತ್ಸಾಹ ನೀಡಿದರೆ ಗೌರವ ನೀಡಿದಂತಾಗುತ್ತದೆ ಎಂದು ಪ್ರೊ. ಎಂ.ಬಿ. ಹೊಳಿಮಠ ಹೇಳಿದರು.
ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಜೆಸಿಐ ರಾಮದುರ್ಗ ಟಕದ ನೇತತ್ವದಲ್ಲಿ ಈಚೆಗೆ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜೆಸಿಐ ರಾಮದುರ್ಗ ಟಕದ ಅಧ್ಯ ಶಂಕರ ಜಿರಂಕಳಿ ಮಾತನಾಡಿದರು ಸಮಾಜ ಕಲ್ಯಾಣ ಅಧಿಕಾರಿ ಎಸ್.ಎಂ. ವಾಲಿ, ಚರ್ಮರೋಗ ತಜ್ಞೆ ಡಾ. ಭಾಗ್ಯಶ್ರೀ ಅಂಕದವರ, ನಿಲಯಪಾಲಕಿಯರಾದ ಎಸ್.ಆರ್. ತೋಳಗಟ್ಟಿ, ಭಾರತಿ ಗೌಡರ, ಆಶಾ ಕಾರ್ಯಕರ್ತೆ ವಿಜಯಲಕ್ಷಿ$್ಮ ಶೆಟ್ಟರ್ ಅವರನ್ನು ಸಂಸ್ಥೆಯಿಂದ ಗೌರವಿಸಲಾಯಿತು.ಜೆಸಿಐ ನಿಕಟಪೂರ್ವ ಅಧ್ಯರು, ಸದಸ್ಯರು, ವಿದ್ಯಾರ್ಥಿನಿಯರು ಇತರರಿದ್ದರು. ಜೆಸಿ ಅನಿಲಕುಮಾರ ಬೀಳಗಿ ಸ್ವಾಗತಿಸಿದರು. ಜೆಸಿ ರಾವೇಂದ್ರ ಹೂಗಾರ ವಂದಿಸಿದರು.