ನಮ್ಮ ಕ್ಲಿನಿಕ್​ ಉಪಯೋಗವಾಗಲಿ

18MNL2
Published on

ಮುನವಳ್ಳಿ: ಜನಸಾಮಾನ್ಯರ ಆರೋಗ್ಯ ದೃಷ್ಟಿಯಿಂದ ತುರ್ತು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ಜನವಸತಿ ಇರುವಲ್ಲಿಯೇ ನಮ್ಮ ಕ್ಲಿನಿಕ್​ ಪ್ರಾರಂಭಿಸಿದ್ದು, ಸದುಪಯೋಗ ಪಡೆಯಬೇಕು ಎಂದು ಶಾಸಕ ವಿಶ್ವಾಸ ವೆದ್ಯ ಹೇಳಿದರು.

ಪಟ್ಟಣದ ಬಜಾರ್​ ಪೇಟೆಯಲ್ಲಿ ಭಾನುವಾರ ರಾಜ್ಯ ಸರ್ಕಾರದಿಂದ ಪ್ರಾರಂಭಿಸಲಾದ ನಮ್ಮ ಕ್ಲಿನಿಕ್​ ಉದ್ಘಾಟಿಸಿ ಮಾತನಾಡಿದರು. ನಮ್ಮ ಕ್ಲಿನಿಕ್​ನಿಂದ ಖಾಸಗಿ ಆಸ್ಪತ್ರೆಗಳಿಗೆ ಹೋಗಲಾಗದವರಿಗೆ ಸಹಾಯವಾಗುತ್ತದೆ. ಅಲ್ಲಿ ಗರ್ಭಿಣಿಯರ ತಪಾಸಣೆ ಮತ್ತು ಆರೆಕೆ, ಕುಟುಂಬ ನಿಯಂತ್ರಣ, ಸೋಂಕು ರೋಗಗಳ ನಿರ್ವಹಣೆ ಸೇರಿ ವಿವಿಧ ವೆದ್ಯಕಿಯ ಚಿಕಿತ್ಸೆ ನೀಡಲಾಗುತ್ತದೆ ಎಂದರು.

ಸವದತ್ತಿ ಟಿಎಪಿಸಿಎಂಎಸ್​ ಅಧ್ಯ ರವೀಂದ್ರ ಯಲಿಗಾರ, ಕಾಂಗ್ರೆಸ್​ ಮುಖಂಡ ಸೋಮಶೇಖರ ಯಲಿಗಾರ, ಪುರಸಭೆ ಅಧ್ಯ ಸಿ.ಬಿ.ಬಾಳಿ, ಸವದತ್ತಿ ಎಪಿಎಂಸಿ ಅಧ್ಯ ಚಂದ್ರು ಪೂಜೇರ,ಮುಖಂಡರಾದ ಎಂ.ಆರ್​.ಗೋಪಶೆಟ್ಟಿ, ಗಜಾನನ ಕಲಾಲ, ಕಲ್ಲಪ್ಪ ಕಿತ್ತೂರ, ಮುಬಾರಕ್​ ಬೆರಕದಾರ್​, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಐ.ಸಿ.ಗಡಾದ, ತಾಲೂಕು ಆರೋಗ್ಯಾಧಿಕಾರಿ ಶ್ರೀಪಾದ ಸಬನೀಸ್​, ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ತಿಮ್ಮಾಣಿ, ಡಾ.ಎಸ್​.ಎಲ್​. ದಂಡಗಿ, ಅಶೋಕ ಮುರಗೋಡ, ಶಂಕರ ನಾಯ್ಕ, ಭುವನೇಶ್ವರಿ, ನೀಲಮ್ಮ ಪಾಟೀಲ, ಗೀತಾ ಹೊಂಗಲ, ಜಿ.ಎಲ್​.ಭಂಡಾರಿ, ವಿಶ್ವಾಸ ಹಿರೇಮಠ, ಸುಭಾಸ ಹುಜರತ್ತಿ, ಪುರಸಭೆಯ ಉಪಾಧ್ಯ, ಸದಸ್ಯರು, ಪುರಸಭೆ ಹಾಗೂ ಸಿಬ್ಬಂದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net