

ರಾಮದುರ್ಗ: ರಟ್ಟೀಹಳ್ಳಿ ತಾಲೂಕಿನ ಮಾಸೂರ ಗ್ರಾಮದ ಶುಶ್ರೂಷಕಿ, ನೇಕಾರ ಕುಟುಂಬದ ಸ್ವಾತಿ ಅವರನ್ನು ಈಚೆಗೆ ಕೊಲೆಮಾಡಿ ಮತದೇಹವನ್ನು ತುಂಗಭದ್ರಾ ನದಿಯಲ್ಲಿ ಎಸೆದ ಕೊಲೆಗಡುಕರಿಗೆ ಕಠಿಣ ಶಿೆ ವಿಧಿಸಿ, ಮತರ ಕುಟುಂಬಕ್ಕೆ ಆರ್ಥಿಕ ನೆರವು ಒದಗಿಸಬೇಕೆಂದು ಒತ್ತಾಯಿಸಿ ನೇಕಾರ ಸಮುದಾಯಗಳ ಒಕ್ಕೂಟದ ವತಿಯಿಂದ ಮಂಗಳವಾರ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಇಂತಹ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಿವೆ. ಹತ್ಯೆಯಾದ ಸ್ವಾತಿ ಕುಟುಂಬ ಸಂಕಷ್ಟದಲ್ಲಿದ್ದು, ಸರ್ಕಾರ ಮತರ ಕುಟುಂಬಕ್ಕೆ ನ್ಯಾಯ ಒದಗಿಸಿ, ತಪ್ಪಿತಸ್ಥರಿಗೆ ಶಿೆ ನೀಡಬೇಕೆಂದು ಒತ್ತಾಯಿಸಿದರು.
ಸಮುದಾಯದ ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ ಕುರುಡಗಿ, ತಾಲೂಕಾಧ್ಯ ನಾರಾಯಣ ಹೂಲಿ, ದೇವಾಂಗ ಸಂದ ಉಪಾಧ್ಯ ಶಂಕ್ರಣ್ಣ ಮುರುಡಿ, ಬನಶಂಕರಿ ದೇವಾಂಗರ ಅಧ್ಯ ನಾರಾಯಣ ಬೆಣ್ಣೂರ, ವಿನೋದ ಕರದಿನ, ಎನ್.ಎಸ್. ಮಲಗಾಂವಿ, ಪಿ.ಆರ್. ಸೂಳಿಬಾವಿ, ವಿಠ್ಠಲ ಮುರುಡಿ, ರವಿ ಕರಡಿಗುಡ್ಡ, ಕೆ.ಎಸ್. ಸೂಳಿಬಾವಿ ಇತರರಿದ್ದರು.
ಏ.2ರಂದು ವಚನಕಾರ, ದೇವರ ದಾಸಿಮಯ್ಯನವರ ಜಯಂತಿ ಹಿನ್ನೆಲೆಯಲ್ಲಿ ಸಮುದಾಯದ ಜತೆಗೆ ಚರ್ಚಿಸಲು ಪೂರ್ವಭಾವಿ ಸಭೆ ಆಯೋಜಿಸುವಂತೆ ತಹಸೀಲ್ದಾರ್ಗೆ ಮನವಿ ಮಾಡಿದರು. ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ, ದೇವರ ದಾಸಿಮಯ್ಯ ಜಯಂತಿ ಸಂಬಂಧ ಶ್ರೀ ತಾಲೂಕಾಧಿಕಾರಿಗಳು ಹಾಗೂ ನೇಕಾರ ಮುಖಂಡರ ಸಭೆ ಕರೆದು ಚರ್ಚಿಸಲಾಗುವುದು ಎಂದರು.