

ಕಿಕ್ಕೇರಿ: ಡಿಜೆ ಬಳಸಿ ಜನರಿಗೆ ತೊಂದರೆ ಕೊಡದಂತೆ ಗಣೇಶೋತ್ಸವ ಆಚರಿಸಿದರೆ ಎಲ್ಲರಿಗೂ ನೆಮ್ಮದಿ ಸಿಗಲಿದೆ ಎಂದು ಇನ್‌ಸ್ಪೆಕ್ಟರ್ ರೇವತಿ ಸಲಹೆ ನೀಡಿದರು.
ಇಲ್ಲಿನ ಕುರುಹಿನಶೆಟ್ಟಿ ಯುವ ಬಳಗ ಏರ್ಪಡಿಸಿದ್ದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಪರಿಸರಕ್ಕೆ ಮಾರಕವಾಗುವಂತೆ ಉತ್ಸವ ನಡೆಯದಿರಲಿ. ಪಟಾಕಿ ಸುಟ್ಟು ಪರಿಸರ ಹಾಳು ಮಾಡದಿರಿ. ಜಲಮಾಲಿನ್ಯಕ್ಕೆ ಪೂರಕವಾದ ಪಿಒಪಿ ಗಣಪನ ಬಳಸದಂತೆ ಜಾಗೃತಿ ಮೂಡಿಸಿ. ಗಣೇಶ ವಿಸರ್ಜನೆ ವೇಳೆ ಪೂಜಾ ಸಾಮಗ್ರಿಗಳನ್ನು ನೀರಿಗೆ ಬಿಸಾಡದೆ ಒಂದೆಡೆ ಶೇಖರಣೆ ಮಾಡಿ, ರಾತ್ರಿ ವೇಳೆ ಗಣಪತಿ ವಿಸರ್ಜನೆ ಮಾಡದೆ ಹಗಲಿನಲ್ಲಿ ವಿಸರ್ಜನೆ ಮಾಡುವಂತೆ ತಿಳಿಸಿದರು.
ಹಿರಿಯರ ಪವಿತ್ರ ಆಶಯಕ್ಕೆ ಚ್ಯುತಿ ಬಾರದಂತೆ ನಿಯಮಗಳನ್ನು ಪಾಲಿಸಿ ಗಣೇಶನನ್ನು ವಿಸರ್ಜಿಸಿ ಎಂದು ತಿಳಿಸಿದರು. ಗ್ರಾಮದ ಮುಖಂಡರಾದ ಸೂರ್ಯನಾರಾಯಣ, ಉಮೇಶ್, ವೆಂಕಟೇಶ, ನವೀನ, ಸೋಮ, ದೀಪು, ಲಕ್ಷ್ಮೀಕಾಂತ ಮತ್ತಿತರರಿದ್ದರು.