

ತುಮಕೂರು: ಹೇಮೆ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಹೋರಾಟ ಮತ್ತೊಂದು ಮಜಲಿಗೆ ಹೊರಳಿದೆ. ಜಿಲ್ಲಾ ಉಸ್ತುವಾರಿ ಸಚಿವರು ಆದ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರ ಹೆಗ್ಗೆರೆಯ ನಿವಾಸದ ಮುಂದೆ ಮೇ 30 ರಂದು ಪ್ರತಿಭಟನೆ ನಡೆಸಿ ಸರ್ಕಾರದ ಗಮನಸೆಳೆಯಲು ನಿರ್ಧರಿಸಲಾಗಿದೆ.
ನಗರದ ಶ್ರೀ ಮುರುಘ ರಾಜೇಂದ್ರ ಸಭಾಂಗಣದಲ್ಲಿ ಶುಕ್ರವಾರ ಹೋರಾಟದ ನೇತೃತ್ವ ವಹಿಸಿರುವ ಮಾಜಿ ಸಚಿವ ಸೊಗಡು ಶಿವಣ್ಣ ಅಧ್ಯಕ್ಷತೆಯ ಸಭೆಯಲ್ಲಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಹೋರಾಟದ ಮುಂದಿನ ಹೆಜ್ಜೆಯ ನಿರ್ಣಯಿಸಲಾಯಿತು.
ನಮ್ಮ ನೀರು, ನಮ್ಮ ಹಕ್ಕು ಹೋರಾಟದ ಭಾಗವಾಗಿ ಮೇ 30 ರ ಬೆಳಗ್ಗೆ 10ಕ್ಕೆ ಸಚಿವ ಪರಮೇಶ್ವರ ನಿವಾಸದ ಮುಂದೆ ಜಿಲ್ಲೆಯ ಜನಪ್ರತಿನಿಧಿಗಳು, ನಾಗರೀಕರು ಹಾಗೂ ರೈತರನ್ನು ಒಳಗೊಂಡು ಬೃಹತ್ ಪ್ರತಿಭಟನಾ ಸಭೆ ನಡೆಸಿ , ಮನವಿ ಪತ್ರ ನೀಡಲು ತೀರ್ಮಾನಿಸ ಲಾಯಿತು.
ಈ ಸಂಧರ್ಭದಲ್ಲಿ ಶಾಸಕರಾದ ಎಂ.ಟಿ.ಕೃಷ್ಣಪ್ಪ, ಬಿ.ಸುರೇಶ್‌ಗೌಡ, ಮಾಜಿ ಸಚಿವ ಡಿ.ನಾಗರಾಜಯ್ಯ, ಮಾಜಿ ಶಾಸಕ ಎಚ್.ನಿಂಗಪ್ಪ, ಮುಖಂಡರಾದ ಎಸ್.ಡಿ.ದಿಲೀಪ್ ಕುಮಾರ್, ಬಿ.ಎಸ್.ನಾಗರಾಜು, ಬಿ.ಎಚ್.ಅನಿಲ್ ಕುಮಾರ್, ಪಂಚಾಕ್ಷರಯ್ಯ, ಎಂ.ಪಿ.ಪ್ರಸನ್ನಕುಮಾರ್, ಕೆ.ಪಿ.ಮಹೇಶ್, ಪುರವರಮೂರ್ತಿ, ಬಸವಕುಮಾರ್, ಆಟೋನವೀನ್, ರೈತ ಸಂಘದ ಜಿಲ್ಲಾಧ್ಯಕ್ಷ ಆರಾಧ್ಯ, ಶಿರಾ ಅಧ್ಯಕ್ಷ ದ್ಯಾಮೇಗೌಡ, ತುರುವೇಕೆರೆಯ ನಾಗೇಂದ್ರ, ಗಂಗಾಧರಯ್ಯ, ಕೆ.ಬಿ.ಉಮೇಶ್, ಸಂಧ್ಯಾ ಮತ್ತಿತರರು ಉಪಸ್ಥಿತರಿದ್ದರು.