

ಶಿಡ್ಲಘಟ್ಟ: ಮೇ 10ರಂದು ಇ-ಖಾತೆಗೆ ಅರ್ಜಿ ಹಾಗೂ ಸೂಕ್ತ ದಾಖಲೆ ಸಲ್ಲಿಸಲು ಕಡೆಯ ದಿನವಾಗಿದ್ದು, ನಾಗರಿಕರು ಸಕಾಲದಲ್ಲಿ ಅರ್ಜಿ ಸಲ್ಲಿಸಿ ಇ-ಖಾತೆ ಪಡೆದುಕೊಳ್ಳುವಂತೆ ನಗರಸಭೆ ಪೌರಾಯುಕ್ತ ಮೋಹನ್ ಮನವಿ ಮಾಡಿದರು.
ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಎಂ.ವಿ.ವೆಂಕಟಸ್ವಾಮಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಸಾಂಕೇತಿಕವಾಗಿ ಇ-ಖಾತೆ ವಿತರಿಸಿ ಮಾತನಾಡಿದರು.
ನಗರದಲ್ಲಿ ಅಂದಾಜು 12 ಸಾವಿರದಷ್ಟು ಆಸ್ತಿಗಳಿವೆ. ಈ ಪೈಕಿ 5 ಸಾವಿರ ಆಸ್ತಿಗಳು ನೋಂದಣಿಯಾಗಿದ್ದು ನೋಂದಣಿ ಆಗದ 7 ಸಾವಿರ ಆಸ್ತಿಗಳಿವೆ. ಇ-ಖಾತೆಗಾಗಿ 5230 ಅರ್ಜಿಗಳನ್ನು ವಿತರಿಸಲಾಗಿದ್ದು, ಸೂಕ್ತ ದಾಖಲೆಗಳೊಂದಿಗೆ 2295 ಅರ್ಜಿಗಳು ಸ್ವೀಕೃತವಾಗಿವೆ. ಇವುಗಳನ್ನು ಪರಿಶೀಲಿಸಿದ್ದು 500 ಅರ್ಜಿಗಳಿಗೆ ಅನುಮೋದನೆ ಪಡೆದುಕೊಳ್ಳಲಾಗಿದೆ. ಈ ಪೈಕಿ 100 ಆಸ್ತಿಗಳಿಗೆ ಇ-ಖಾತೆಯನ್ನು ಇಂದು ವಿತರಿಸಿದ್ದು, ಉಳಿದ 500 ಅರ್ಜಿಗಳು ಅನುಮೋದನೆ ಪಡೆದುಕೊಳ್ಳುವ ಹಂತದಲ್ಲಿದ್ದು, ಶೀಘ್ರದಲ್ಲೇ ಅವನ್ನು ವಿಲೇವಾರಿ ಮಾಡಲಾಗುವುದು ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷ ಎಂ.ವಿ.ವೆಂಕಟಸ್ವಾಮಿ ಸೇರಿದಂತೆ ನಗರಸಭೆ ಸದಸ್ಯರು, ಸಿಬ್ಬಂದಿ ಹಾಜರಿದ್ದರು.
.