

ವಿಜಯವಾಣಿ ಸುದ್ದಿಜಾಲ ಕೊಕ್ಕಡ
ಹಿಂದುಗಳ ಪ್ರತಿ ಹಬ್ಬದ ಹಿಂದೆ ವೈಜ್ಞಾನಿಕ ವಿಚಾರಗಳಿವೆ. ಕೃಷಿ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಆಚರಣೆಗಳನ್ನು ಧಾರ್ಮಿಕ ಹಿನ್ನೆಲೆಗಳ ಮೂಲಕ ನಮ್ಮ ಹಿರಿಯರು ನಮಗೆ ತಿಳಿಸಿದ್ದ ಕಾರಣ ಇಂದಿಗೂ ಇಂತಹ ಆಚರಣೆಗಳು ಜೀವಂತವಾಗಿವೆ ಎಂದು ರಾಷ್ಟ್ರ ಸೇವಿಕಾ ಸಮಿತಿಯ ಪುತ್ತೂರು ಜಿಲ್ಲಾ ಸೇವಾ ಪ್ರಮುಖ್ ಶ್ರೀದೇವಿ ನಾಗರಾಜ್ ಭಟ್ ನುಡಿದರು.
ಕಾಯರ್ತಡ್ಕದ ಸೇವಾ ಶರಧಿ ಟ್ರಸ್ಟ್ ವೈಷ್ಣವಿ ಶಿಶುಮಂದಿರ, ರಾಷ್ಟ್ರ ಸೇವಿಕಾ ಸಮಿತಿ ಹಾಗೂ ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಶ್ರಯದಲ್ಲಿ ಬಾಲಗೋಕುಲ ಮತ್ತು ಶಿಶುಮಂದಿರದ ಮಕ್ಕಳಿಗಾಗಿ ಆಯೋಜಿಸಿದ ಸಾಮೂಹಿಕ ಹುಟ್ಟುಹಬ್ಬ ಮತ್ತು ಮಾತೃವಂದನ ಕಾರ್ಯಕ್ರಮದಲ್ಲಿ ಬೌದ್ಧಿಕ ನೀಡಿದರು.
ಉದ್ಯಮಿ ಹಾಗೂ ಕೃಷಿಕ ಮಧುಕರ ರಾವ್ ಮಚ್ಚಳೆ ಅಧ್ಯಕ್ಷತೆ ವಹಿಸಿದ್ದರು. ಅಭ್ಯಾಸ್ ಕಾಲೇಜಿನ ಉಪಪ್ರಾಂಶುಪಾಲ ಚಂದ್ರಶೇಖರ ಗೌಡ, ಶ್ರೀ ಉಮಾಮಹೇಶ್ವರ ದೇವಸ್ಥಾನದ ಅಧ್ಯಕ್ಷ ಆನಂದ ಗೌಡ ಮರಕ್ಕಡ, ವೈಷ್ಣವಿ ಶಿಶುಮಂದಿರದ ಅಧ್ಯಕ್ಷ ಉಮೇಶ್ ಕುಡುಪ್ಪಾರು ಉಪಸ್ಥಿತರಿದ್ದರು.
ರಾಷ್ಟ್ರ ಸೇವಿಕಾ ಸಮಿತಿ ಪುತ್ತೂರು ಜಿಲ್ಲಾ ಕಾರ್ಯವಾಹಿಕ ವೇದಾವತಿ ಜನಾರ್ದನ್, ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯ ಸಂಚಾಲಕ ಪ್ರಶಾಂತ್ ಶೆಟ್ಟಿ ದೇರಾಜೆ, ಮುಖ್ಯಶಿಕ್ಷಕ ಚಂದ್ರಶೇಖರ ಶೇಟ್, ಶಿಕ್ಷಕಿಯರಾದ ಸ್ವಾತಿ ಕೆ. ವಿ, ಸುಪ್ರೀತಾ ಎ, ಶುಭಲಕ್ಷ್ಮೀ, ಸೇವಾ ಶರಧಿ ಟ್ರಸ್ಟ್ ಕಾರ್ಯದರ್ಶಿ ಪುರುಷೋತ್ತಮ, ಶಿಶುಮಂದಿರದ ಕೋಶಾಧಿಕಾರಿ ನಾರಾಯಣ ಭಂಡಾರಿ, ಲೋಕೇಶ್ ಮರಕಡ, ಉಜಿರೆ ತಾಲೂಕು ಸೇವಾ ಪ್ರಮುಖ್ ವಿಜಯ ನಾವೂರು ಸಹಕರಿಸಿದರು.
ವಿದ್ಯಾರ್ಥಿಗಳ ಸರಸ್ವತಿ ವಂದನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸೇವಾ ಶರದಿ ಟ್ರಸ್ಟಿನ ಅಧ್ಯಕ್ಷ ಜನಾರ್ದನ್ ಕಜೆ ಸ್ವಾಗತಿಸಿದರು. ಶಿಶು ಮಂದಿರದ ಮಾತಾಜಿ ತುಳಸಿ ವಂದಿಸಿದರು. ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯ ಸಹ ಶಿಕ್ಷಕ ದಿಲೀಪ್ ಕಾರ್ಯಕ್ರಮ ನಿರ್ವಹಿಸಿದರು.