ಉತ್ಸವದಲ್ಲಿ ಪಟಾಕಿ ಸಿಡಿಸಿದವರ ವಿರುದ್ಧ ಕೇಸ್​

Firecrakers_symbol
Published on

ಕಾಸರಗೋಡು: ಕುಂಡಂಗುಳಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಆರಾಟು ಮಹೋತ್ಸವ ಸಂದರ್ಭ ಪಟಾಕಿ ಸಿಡಿಸಿದ ಮೂರು ಮಂದಿ ವಿರುದ್ಧ ಆದೂರು ಠಾಣೆ ಪೊಲೀಸರು ಕೇಸ್​ ದಾಖಲಿಸಿಕೊಂಡಿದ್ದಾರೆ.

ಕುಂಡಂಗುಳಿ ಪಾಂಡಿಕಂಡ ನಿವಾಸಿ ಮಧುಸೂದನನ್​ ಸೇರಿದಂತೆ ಮೂರು ಮಂದಿ ವಿರುದ್ಧ ಉತ್ಸವದಲ್ಲಿ ಯಾವುದೇ ಮುಂಜಾಗ್ರತೆ ಪಾಲಿಸದೆ ರ್ನಿಲಕ್ಷದಿಂದ ಪಟಾಕಿ ಸಿಡಿಸಿರುವ ಬಗ್ಗೆ ಕೇಸ್​ ದಾಖಲಿಸಲಾಗಿದೆ. ಬುಧವಾರ ಸಂಜೆ 7ಕ್ಕೆ ಆದೂರು ಪೊಲೀಸ್​ ಠಾಣೆ ವ್ಯಾಪ್ತಿಯ ಮುಳಿಯಾರು ಪಾಂಡಿಕಂಡ ರಸ್ತೆಯ ಸೇತುವೆ ಬಳಿ ಪಟಾಕಿ ಸಿಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net