ಆಲಂಕಾರು ಶ್ರೀಭಾರತಿ ವಿದ್ಯಾಸಂಸ್ಥೆಯಲ್ಲಿ ಮಾತೃಭೋಜನ

Kdb_Matrubhojana
Published on

ಕಡಬ: ಆಲಂಕಾರು ಶ್ರೀ ಭಾರತಿ ವಿದ್ಯಾಸಂಸ್ಥೆಯಲ್ಲಿ ಪಾದಪೂಜೆ, ಮಾತೃ ಕೈ ತುತ್ತು ಭೋಜನ ಕಾರ್ಯಕ್ರಮ ಗುರುವಾರ ಸಾಯಂಕಾಲ ನಡೆಯಿತು.

ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಉಪಾಧ್ಯಕ್ಷ ಈಶ್ವರ ಗೌಡ ಪಜ್ಜಡ್ಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಾಯಂದಿರ ಪಾದಪೂಜೆ ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಡಾ.ಸುರೇಶ್ ಕುಮಾರ್ ಕೂಡೂರು ವಹಿಸಿದ್ದರು. ಪುತ್ತೂರು ವಿವೇಕಾನಂದ ವಿದ್ಯಾವಧರ್ಕ ಸಂಘದ ಶೈಕ್ಷಣಿಕ ಪರಿವೀಕ್ಷಕ ರಘುರಾಜ್ ಭಟ್ ಉಬರಡ್ಕ ಮುಖ್ಯ ಭಾಷಣ ಮಾಡಿದರು. ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಪದಾಧಿಕಾರಿಗಳಾದ ಈಶ್ವರ ಭಟ್ ಕೊಂಡಾಡಿ, ರಾಮಚಂದ್ರ ಭಟ್ ಅತ್ರಿವನ, ವಿಶಾಲಾಕ್ಷಿ ನೈಯಲ್ಗ, ಮಮತಾ ಅಂರ್ಬಜೆ, ಶ್ರೀಧರ ಬಲ್ಯಾಯ, ಆಂಗ್ಲ ಮಾಧ್ಯಮ ವಿಭಾಗದ ಮುಖ್ಯಶಿಕ್ಷಕ ಸತೀಶ್ ಜಿ.ಆರ್., ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮಪ್ರಸಾದ್ ಬಲ್ಯಾಯ, ಕನ್ನಡ ಮಾಧ್ಯಮ ವಿಭಾಗದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಲೋಕೇಶ್ ಗೌಡ ಅರ್ಬಿ ಮೊದಲಾದವರು ಇದ್ದರು.

ಕನ್ನಡ ವಿಭಾಗದ ಮುಖ್ಯಶಿಕ್ಷಕಿ ಆಶಾ ಎಸ್.ರೈ ಸ್ವಾಗತಿಸಿದರು. ಶಿಕ್ಷಕಿ ವೇದಾವತಿ ವಂದಿಸಿದರು. ಶಿಕ್ಷಕ ಚಂದ್ರಹಾಸ ಕೆ.ಸಿ.ಕುಂಟ್ಯಾನ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net