ಬಿಗ್​ಬಾಸ್​ ಖ್ಯಾತಿಯ ಮಸ್ತಾನ್​ ಮನೆ ಮೇಲೆ ಪೊಲೀಸರ ದಾಳಿ..!

Masthan 1
Published on

ಬೆಂಗಳೂರು: ಡ್ರಗ್ಸ್​ ವ್ಯವಹಾರ ಸಂಬಂಧ ಬಿಗ್​ಬಾಸ್ ಖ್ಯಾತಿಯ ಮಸ್ತಾನ್ ಮನೆ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ.

ಸಂಜಯ್ ನಗರದಲ್ಲಿರುವ ಮಸ್ತಾನ್ ಮನೆ ಮೇಲೆ ಗೋವಿಂದಪುರ ಪೊಲೀಸರು ಶುಕ್ರವಾರ ಬೆಳ್ಳಂಬೆಳಗ್ಗೆ ದಾಳಿ ಮಾಡಿದ್ದಾರೆ. ನೈಜೀರಿಯನ್ ಡ್ರಗ್​ ಫೆಡ್ಲರ್ಸ್ ಜತೆ ಮಸ್ತಾನ್​ ಸಂಪರ್ಕ ಹೊಂದಿರುವ ಆರೋಪ ಕೇಳಿಬಂದಿದೆ.

ಡ್ರಗ್ಸ್ ಪ್ರಕರಣದಲ್ಲಿ ನೈಜಿರಿಯನ್ ಡ್ರಗ್ಸ್ ಪೆಡ್ಲರ್ ಬಂಧನವಾಗಿತ್ತು. ಈ ವೇಳೆ ನೀಡಿದ ಮಾಹಿತಿ ಆಧಾರದ ಮೇಲೆ ಕೋರ್ಟ್​ನಿಂದ ಸರ್ಚ್ ವಾರೆಂಟ್ ಪಡೆದು ದಾಳಿ ಮಾಡಲಾಗಿದೆ. ಈ ವೇಳೆ ಮನೆಯಲ್ಲಿಯೇ ಇದ್ದ ಮಸ್ತಾನ್​ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಸ್ತಾನ್ ಸ್ನೇಹಿತ ಕೇಶವ್ ಮನೆ ಮೇಲೂ ಸಹ ಗೋವಿಂದಪುರ ಠಾಣಾ ಪೊಲೀಸರು ದಾಳಿ ಮಾಡಿದ್ದಾರೆ. ಸದ್ಯ ಮನೆಯನ್ನು ಪರಿಶೀಲಿಸುತ್ತಿರುವ ಪೊಲೀಸರು ಸಾಕ್ಷ್ಯಾಧಾರ ಹುಡುಕಾಟದಲ್ಲಿ ತೊಡಗಿದ್ದಾರೆ.

ಅಂದಹಾಗೆ ಮಸ್ತಾನ ಬಿಗ್​ಬಾಸ್​ 4ನೇ ಆವೃತ್ತಿಯಲ್ಲಿ ವೈಲ್ಡ್​ ಕಾರ್ಡ್​ ಮೂಲಕ ಎಂಟ್ರಿ ಪಡೆದುಕೊಂಡಿದ್ದರು. ಕೇವಲ ಒಂದೇ ವಾರಕ್ಕೆ ಮನೆಯಿಂದ ಹೊರಬಂದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net