

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಶ್ರೀ ನಾರಾಯಣಗುರು ಸ್ಕೂಲ್ ಆಫ್ ಚೆಸ್ ಉಡುಪಿ ಮತ್ತು ಕಾಪು ಆಶ್ರಯದಲ್ಲಿ ಕಾಪು ಶ್ರೀ ಹಳೇ ಮಾರಿಗುಡಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ರಾಷ್ಟ್ರಮಟ್ಟದ ಫಿಡೇ ರೇಟೆಡ್ ರ‌್ಯಾಪಿಡ್ ಚೆಸ್ ಪಂದ್ಯಾಟದಲ್ಲಿ ಇಂಟರ್‌ನ್ಯಾಶನಲ್ ಮಾಸ್ಟರ್ ಶರಣ್ ರಾವ್ 25 ಸಾವಿರ ರೂ. ಸಹಿತ ಪ್ರಶಸ್ತಿ ವಿಜೇತರಾದರು.
ತಹಸೀಲ್ದಾರ್ ಪ್ರತಿಭಾ ಆರ್., ಮಾಜಿ ಶಾಸಕ ಲಾಲಾಜಿ ಮೆಂಡನ್ ಶುಭಾಶಂಸನೈದರು. ಮಂಜೇಶ್ವರ ಕನಿಲ ಪುರುಷೋತ್ತಮ ಗುರಿಕಾರ ಅಧ್ಯಕ್ಷತೆ ವಹಿಸಿದ್ದರು. ಉಳಿಯರಗೋಳಿ ದಂಡತೀರ್ಥ ಪ್ರತಿಷ್ಠಾನ ಅಧ್ಯಕ್ಷ ಸೀತಾರಾಮ ಎಸ್.ಭಟ್, ಕಾಪು ಬಿಲ್ಲವರ ಸಹಾಯಕ ಸಂಘ ಗೌರವಾಧ್ಯಕ್ಷ ಪ್ರಭಾಕರ ಪೂಜಾರಿ, ಗಾಂಧಿ ಆಸ್ಪತ್ರೆ ಆಡಳಿತ ನಿದೇಶಕ ವ್ಯಾಸರಾಜ್ ತಂತ್ರಿ, ನಾರಾಯಣಗುರು ವಿಚಾರ ವೇದಿಕೆ ಉಪಾಧ್ಯಕ್ಷ ಸುಧಾಕರ ಸಾಲ್ಯಾನ್, ಉಪನ್ಯಾಸಕಿ ಜ್ಯೋತಿ, ವಿದ್ಯೋದಯ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲೆ ಅನಿತಾ ಪಿ.ರಾಜ್, ಹಳೇ ಮಾರಿಯಮ್ಮ ದೇವಳದ ರಾಮ ನಾಯಕ್, ಎಸ್‌ಎನ್‌ಜಿಎಸ್‌ಇ ಟ್ರಸ್ಟ್ ಅಧ್ಯಕ್ಷ ಉಮಾನಾಥ್ ಕಾಪು, ಯುಡಿಸಿಎ ಅಧ್ಯಕ್ಷ ಅಮಿತ್ ಕುಮಾರ್ ಶೆಟ್ಟಿ, ಸಂಘಟಕ ಸಾಕ್ಷಾತ್ ಯು.ಕೆ., ಬಾಬು ಜೆ.ಪೂಜಾರಿ, ನಿರ್ದೇಶಕಿ ಸೌಂದರ್ಯ ಯು.ಕೆ., ಮುಖ್ಯ ಸಲಹೆಗಾರ ಲಕ್ಷ್ಮೀನಾರಾಯಣ ಆಚಾರ್ಯ, ಸಲಹೆಗಾರ ನಾಗೇಶ್ ಕಾರಂತ್ ಕಾಪು, ಪಾಂಗಾಳ ಆಸರೆ ಸಂಸ್ಥೆ ಸ್ಥಾಪಕ ಪೆನ್ವೆಲ್ ಸೋನ್, ಲೋಕೇಶ್ ಕೊಡ್ಮಾಣ್, ಸುನೀಲ್ ಪೂಜಾರಿ ಉಪಸ್ಥಿತರಿದ್ದರು. ಎಫಿಲೆನ್ಸ್ ಟೆಕ್ನಾಲಜಿಸ್ ಮಾರ್ಕೆಟಿಂಗ್ ಕಂಪನಿ ಮಂಗಳೂರು, ಯುಡಿಸಿಎ ಉಡುಪಿ, ಕೆಎಸ್‌ಸಿಎ, ಎಐಸಿಎಸ್ ಫಿಡೆ ಸಂಸ್ಥೆಗಳು ಸಹಕರಿಸಿದ್ದವು.