ದೇವರ ಅನುಗ್ರಹದಿಂದ ಪದವಿ ಪುರಸ್ಕಾರ : ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಆಶೀರ್ವಚನ

swamiji
ವಿಶಕರ್ಮ ಪೀಠದ ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿ
Published on

ಕೊಕ್ಕರ್ಣೆ: ದೇವರ ಮತ್ತು ಗುರುಗಳ ಸೇವೆ ಮಾಡಲು ಅಧಿಕಾರ ಮತ್ತು ಅಂತಸ್ತು ಮುಖ್ಯವಲ್ಲ. ಪದವಿ ಪುರಸ್ಕಾರಗಳು ಗುರುಗಳ ಮತ್ತು ದೇವರ ಅನುಗ್ರಹದಿಂದ ದೊರಕುತ್ತದೆ ಎಂದು ವಿಶ್ವಕರ್ಮ ಪೀಠದ ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಹೇಳಿದರು. ಮಂಗಳವಾರ ನೂತನವಾಗಿ ನಿರ್ಮಾಣಗೊಂಡ ಕಜ್ಕೆ ಶ್ರೀ ಅನ್ನಪೂರ್ಣೆಶ್ವರೀ ದೇವಸ್ಥಾನಕ್ಕೆ ನೂತನ ಆಡಳಿತ ಮಂಡಳಿ ರಚನೆ ಮತ್ತು 2024ನೇ ಸಾಲಿನಲ್ಲಿ ಶ್ರೀ ಗುರುಗಳ ಚಾತುರ್ಮಾಸ್ಯ ವ್ರತಾಚರಣೆ ಕುರಿತ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ಆಡಳಿತ ಮಂಡಳಿ ಅಧ್ಯಕ್ಷರಾಗಿ ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿ, ಉಪಾಧ್ಯಕ್ಷರಾಗಿ ರಾಜೇಶ್ ಆಚಾರ್ಯ ಮಠದಬೆಟ್ಟು ಮತ್ತು ಗೋಪಾಲ್ ಆಚಾರ್ಯ ಸಂತೆಕಟ್ಟೆ, ಗೌರವ ಮಾರ್ಗದರ್ಶಕರಾಗಿ ಎನ್.ಕರುಣಾಕರ ಶೆಟ್ಟಿ ಕಜ್ಕೆ, ಟಿ.ಜಿ.ಆಚಾರ್ಯ, ವಿದ್ವಾನ್ ಚಂದ್ರಕಾಂತ್ ಶರ್ಮ, ರವೀಂದ್ರ ಪುರೋಹಿತ್, ಕಾಶಿನಾಥ್ ಶೆಣೈ ಕಜ್ಕೆ, ಶ್ರೀಧರ ಕಾಮತ್ ಕಜ್ಕೆ, ಕೃಷ್ಣಯ್ಯ ಶೆಟ್ಟಿ ಸಹಿತ ಅನೇಕರನ್ನು ಸದಸ್ಯರು ಹಾಗೂ ಸಲಹೆಗಾರನ್ನಾಗಿ ಆಯ್ಕೆ ಮಾಡಲಾಯಿತು.
ಜುಲೈ 20ರಿಂದ ಸೆ.18ರ ತನಕ ಕಜ್ಕೆಯಲ್ಲಿ ನಡೆಯುವ ಗುರುಗಳ ಚಾತುರ್ಮಾಸ್ಯ ವ್ರತಾಚರಣೆಗೆ ವಿವಿಧ ಉಪಸಮಿತಿಗಳನ್ನು ರಚಿಸಿ ಗುರುಗಳ ಚಾತುರ್ಮಾಸ್ಯ ಯಶಸ್ವಿಗೊಳಿಸುವ ಸಂಕಲ್ಪ ಸಭೆಯಲ್ಲಿ ಕೈಗೊಳ್ಳಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net