

ಮುನವಳ್ಳಿ: ಶಿಂದೋಗಿ ಗ್ರಾಮ ಸದಾ ಧಾರ್ಮಿಕ ಹಾಗೂ ಸಾಂಸತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಆದರ್ಶ ಗ್ರಾಮವಾಗಿ ಮಾರ್ಪಟ್ಟಿದೆ. ಸಾಮೂಹಿಕ ವಿವಾಹಗಳು ಬಡವರಿಗೆ ತುಂಬಾ ಅನುಕೂಲವಾಗಿದೆ ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಡಾ.ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ಸಮೀಪದ ಶಿಂದೋಗಿ ಗ್ರಾಮದಲ್ಲಿ 29ನೇ ವರ್ಷದ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಇಂಥ ಸಮಾಜಮುಖಿ ಕಾರ್ಯಕ್ರಮಗಳು ಸದಾ ಜರುಗಿ ನಮ್ಮ ಸಂಸತಿ ಪರಂಪರೆ ಉಳಿಸಿ ಬೆಳೆಸಿಕೊಂಡು ಮುಂದೆ ಸಾಗಬೇಕು ಎಂದರು.
ಶಾಸಕ ವಿಶ್ವಾಸ ವೆದ್ಯ ಮಾತನಾಡಿ, ಕಳೆದ 24 ವರ್ಷಗಳಿಂದ ಸಾಮೂಹಿಕ ವಿವಾಹ ಹಮ್ಮಿಕೊಳ್ಳುತ್ತಾ ಬಂದಿರುವ ಶಿಂದೋಗಿ ಗ್ರಾಮಸ್ಥರ ಕಾರ್ಯ ನಿಜಕ್ಕೂ ಶ್ಲಾನೀಯ. ಇಂಥ ಕಾರ್ಯಗಳಿಗೆ ನನ್ನ ಸಹಾಯ, ಸಹಕಾರ ಸದಾ ಇರುತ್ತದೆ. ಮುಂದಿನ ದಿನಗಳಲ್ಲಿ ಶಿಂದೋಗಿ ಗ್ರಾಮವನ್ನು ಸರ್ಕಾರದ ಅನುದಾನದಿಂದ ಅಭಿವದ್ಧಿಪಡಿಸಲಾಗವುದು ಎಂದರು.
ಬಿಜೆಪಿ ಮುಖಂಡ ವಿರೂಪಾ ಮಾಮನಿ ಮಾತನಾಡಿ, ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಇಂಥ ಸಾಮೂಹಿಕ ವಿವಾಹಗಳು ಸಹಕಾರಿಯಾಗಿವೆ ಎಂದರು.
ಜಾನಪದ ಮೇಳ: ಶ್ರೀ ದುರ್ಗಾದೇವಿಗೆ ರುದ್ರಾಭಿಷೇಕ, ವಿಶೇಷ ಅಲಂಕಾರ ಪೂಜೆ ಹಾಗೂ ವಿವಿಧ ಮಜಲುಗಳಿಂದ ಡೊಳ್ಳಿನ ಕುಣಿತ ಮೊದಲಾದ ಜಾನಪದ ಮೇಳಗಳು ಜರುಗಿದವು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ವಿಜಂಭಣೆಯಿಂದ ಜರುಗಿತು.
ಸೋಮಶೇಖರಮಠದ ಮುರುಂದ್ರ ಸ್ವಾಮೀಜಿ, ತೊರಗಲ್ಲದ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ, ಬೆಲಹೊಂಗಲದ ಪ್ರಭುನೀಲಕಂಠ ಸ್ವಾಮೀಜಿ, ಧಾರವಾಡದ ಬಸವರಾಜ ದೇವರು, ಗೊರವನಕೊಳ್ಳದ ಶಿವಾನಂದ ಸ್ವಾಮೀಜಿ, ಈರಯ್ಯಸ್ವಾಮಿ ಹಿರೇಮಠ, ಮಡಿವಾಳಯ್ಯಸ್ವಾಮಿ ಹಿರೇಮಠ, ಗ್ರಾಪಂ ಅಧ್ಯ ಡಿ.ಡಿ.ಟೋಪೋಜಿ, ಸುರೇಶ ಶಿಂಧೆ, ಶೇಖರ ಗೋಕಾಂವಿ, ನಾಗರಾಜ ನೇಗಿನಾಳ, ಕೀರಪ್ಪ ಖಾನಪ್ಪನವರ, ಬೀರಪ್ಪ ಟೋಪೋಜಿ, ಕೀರಪ್ಪ ಚಂದರಗಿ ಇತರರು ಇದ್ದರು.