ಮಸ್ಕಿ ತಾಲೂಕಿಗೆ ಗದ್ದೆಮ್ಮ ಕನಕಪ್ಪ ಫಸ್ಟ್

8-msk-4
ಗದ್ದೆಮ್ಮ ಕನಕಪ್ಪ
Published on

ಮಸ್ಕಿ: ಪಟ್ಟಣದ ರಾಷ್ಟ್ರೀಯ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಗದ್ದೆಮ್ಮ ಕನಕಪ್ಪ 572 (ಶೇ.95.33) ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಕಲಾ ವಿಭಾಗದಲ್ಲಿ ಶಾಂತಮ್ಮ ಗುಂಡಪ್ಪ 536 (ಶೇ.89.33) ಅಂಕ ಪಡೆದು ಕಾಲೇಜಿಗೆ ಪ್ರಥಮ ಗಳಿಸಿದ್ದಾರೆ ಎಂದು ಪ್ರಾಚಾರ್ಯ ವೀರೇಶ ಹೂಗಾರ್ ತಿಳಿಸಿದ್ದಾರೆ. ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನಲ್ಲಿ ಶೇ.51 ಫಲಿತಾಂಶ ಬಂದಿದೆ. ಕಲಾ ವಿಭಾಗದಲ್ಲಿ ಯಲ್ಲಮ್ಮ ಸಿದ್ದಪ್ಪ 560 ಅಂಕ, ವಾಣಿಜ್ಯ ವಿಭಾಗದಲ್ಲಿ ಗೌರಿ ರಾಘವೇಂದ್ರ ಪತ್ತಾರ 540 ಅಂಕ ಪಡೆದಿದ್ದಾರೆ ಎಂದು ಪ್ರಭಾರ ಪ್ರಾಚಾರ್ಯ ಮಹಾಂತೇಶ ಮಸ್ಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net