ಮಸ್ಕಿ ಉಪಚುನಾವಣೆಯ ಪ್ರಚಾರಕ್ಕೆ ಆಗಮಿಸಿದ ಬಿಜೆಪಿ ನಾಯಕರಿಗೆ ಗ್ರಾಮಸ್ಥರ ತರಾಟೆ!

ಋಅಮುಲು
Published on

ರಾಯಚೂರು: ಮಸ್ಕಿ ಉಪಚುನಾವಣೆಯ ಪ್ರಚಾರಕ್ಕೆ ಆಗಮಿಸಿದ ಬಿಜೆಪಿ ನಾಯಕರಿಗೆ ಗ್ರಾಮಸ್ಥರು ಘೇರಾವ್ ಹಾಕಿದ ಪ್ರಸಂಗ ರಾಯಚೂರಿನ ಅಮಿನಗಡ ಹಾಗೂ ವಟಗಲ್​ನಲ್ಲಿ ನಡೆಯಿತು.

ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಹಾಗೂ ಸಚಿವ ಶ್ರೀರಾಮುಲು ಅವರನ್ನು ಗ್ರಾಮಸ್ಥರು ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಂಡರು. 5A ಕಾಲುವೆ ಮಾಡಲು ಆಗಲ್ಲ ಎಂದಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

0ಪಾಮನಕಲ್ಲೂರಿನಲ್ಲಿ ರೈತರು 134 ದಿನಗಳಿಂದ ಕಾಲುವೆಗಾಗಿ ಧರಣಿ ನಡೆಸುತ್ತಿದ್ದಾರೆ. ಒಂದು ದಿನವು ಭೇಟಿ ನೀಡಿದ ರಾಜಕೀಯ ನಾಯಕರು, ಉಪಚುನಾವಣೆ ಹಿನ್ನೆಲೆಯಲ್ಲಿ ಪ್ರತಾಪಗೌಡರ ಪರವಾಗಿ ಮತ ಯಾಚನೆಗೆ ಬಂದಾಗ ಮುತ್ತಿಗೆ ಹಾಕಿದರು.

ನಮಗೆ ಯಾರು ನೀರಾವರಿ ಸೌಲಭ್ಯ ಕಲ್ಪಿಸುತ್ತಾರೆ ಅವರಿಗೆ ಮತ ಹಾಕುತ್ತೇವೆ. ನಾವಿಂದು ಉಪ್ಪು ನೀರು ಕುಡಿಯುತ್ತಿದ್ದೇವೆ. ನೀವು ಸಹ ಇದೇ ನೀರು ಕುಡಿದು ನೋಡಿ ನಮ್ಮ ಕಷ್ಟ ಗೊತ್ತಾಗುತ್ತದೆ ಎಂದು ಆಕ್ರೋಶ ಹೊರಹಾಕಿದರು.

ರೈತರ ಅಕ್ರೋಶಕ್ಕೆ ತಬ್ಬಿಬ್ಬಾದ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್, ಶ್ರೀರಾಮುಲು ಹಾಗೂ ಸಂಸದ ಸಂಗಣ್ಣ ಕರಡಿ ಮೌನವಾದರು. ಬಿಜೆಪಿ ಮುಖಂಡರು ಎಷ್ಟೇ ಮನವೊಲಿಕೆಗೆ ಮುಂದಾದ್ರೂ ರೈತರ ಆಕ್ರೋಶ ಕರಗಲೇ ಇಲ್ಲ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net