ಮಾರುತೇಶ್ವರ ಕಾರ್ತಿಕೋತ್ಸವ ಅದ್ದೂರಿ

Published on

ಹನುಮಸಾಗರ: ಸಮೀಪದ ಹಿರೇಗೊಣ್ಣಾಗರ ಗ್ರಾಮದಲ್ಲಿ ಶ್ರೀ ಮರಡಿ ಮಾರುತೇಶ್ವರ ಕಾರ್ತಿಕೋತ್ಸವ ಭಾನುವಾರ ವಿಜೃಂಭಣೆಯಿಂದ ಜರುಗಿತು.

ಬೆಳಗ್ಗೆಯಿಂದ ದೇವಸ್ಥಾನದಲ್ಲಿ ಹೋಮ, ಹವನ, ಅಭಿಷೇಕ, ಕುಂಕುಮಾರ್ಚನೆ, ಎಲೆಕಟ್ಟು ಪೂಜೆ, ಸುತಗಾಯಿ ಒಡೆಯುವುದು, ನೈವೇದ್ಯ ಅರ್ಪಣೆ ಇತರ ಧಾರ್ಮಿಕ ಕಾರ್ಯಕ್ರಗಳು ನೆರವೇರಿದವು.

ಸಂಜೆ ನೂರಾರು ಭಕ್ತರ ಸಮ್ಮುಖದಲ್ಲಿ ಉಚ್ಛಾಯ್ಯ ಎಳೆಯಲಾಯಿತು. ಗ್ರಾಮಸ್ಥರಾದ ಶಾಮರಾವ್ ಕುಲಕರ್ಣಿ, ರಾಮಣ್ಣ ಕುಂಬಾರ, ಭೀಮಪ್ಪ ಮೆಣಸಗೇರಿ, ಭೀಮಪ್ಪ ಮಾಸ್ತರ್ ಇಟಗಿ, ಅಲ್ಲಾಸಾಬ ನದಾಫ್, ಹುಚ್ಚೀರಪ್ಪ ಬಾದಿಮನಾಳ, ಬಸಪ್ಪ ಉಪ್ಪಾರ, ಬಸವರಾಜ ಕುಂಬಾರ, ಶಿವನಂದಪ್ಪ ಅಲ್ಲೂರು, ಸಕ್ರಪ್ಪ ಮೆಣಸಗೇರಿ, ಹನುಮಪ್ಪ ಚಂದ್ರಗಿರಿ, ಶಿವಶರಣಪ್ಪ ಮೆಣಸಗೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net