ಮಸಬಹಂಚಿನಾಳದ ಮಾರುತೇಶ್ವರ ಕಾರ್ತಿಕೋತ್ಸವ ಸಂಪನ್ನ

Sri Maruteshwara Karthika Mahotsava
ಮಸಬಹಂಚಿನಾಳ ಮಾರುತೇಶ್ವರ ದೇವಸ್ಥಾನ ಆವರಣದಲ್ಲಿ ಕಾರ್ತಿಕ ಮಹೋತ್ಸವ ನಿಮಿತ್ತ ಭಕ್ತರು ಸೋಮವಾರ ಸಂಜೆ ದೀಪ ಹಚ್ಚಿದರು.
Published on

ಕುಕನೂರು: ಮಸಬಹಂಚಿನಾಳದ ಆರಾಧ್ಯ ದೈವ ಶ್ರೀ ಮಾರುತೇಶ್ವರ ಕಾರ್ತಿಕ ಮಹೋತ್ಸವ ಸೋಮವಾರ ರಾತ್ರಿ ಅಪಾರ ಭಕ್ತರ ಮಧ್ಯೆ ಸಂಪನ್ನಗೊಂಡಿತು.

ದೇವಸ್ಥಾನಕ್ಕೆ ಮಸಬಹಂಚಿನಾಳ ಹಾಗೂ ಸುತ್ತಲಿನ ಗ್ರಾಮಗಳಿಂದ ಬೆಳಗ್ಗೆಯಿಂದಲೇ ಭಕ್ತರು ಪಾದಯಾತ್ರೆ ಮೂಲಕ ಆಗಮಿಸಿ ಮಾರುತೇಶ್ವರನ ದರ್ಶನ ಪಡೆದರು. ಕೆಲವರು ಹರಕೆ ಬುತ್ತಿ ಕಟ್ಟಿಕೊಂಡು ಬಂದು ನೈವೇದ್ಯ ಸಮರ್ಪಿಸಿದರು.

ಸಂಜೆ ವೇಳೆಗೆ ದೇವಸ್ಥಾನದ ಸುತ್ತಲೂ ಪಣತೆ ಬೆಳಗಿಸಿ ಭಕ್ತಿ ಸಮರ್ಪಿಸಿದರು. ಮಂಗಳವಾರ ಬೆಳಗ್ಗೆವರೆಗೂ ಗೋದಿ ಹುಗ್ಗಿ, ಅನ್ನ, ಸಾಂಬಾರ್ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net