ಗೊರೇಬಾಳ: ಗ್ರಾಮದ ಮರುಳಸಿದ್ಧೇಶ್ವರ ಸ್ವಾಮಿ, ಗೌರಮ್ಮದೇವಿ, ವಿಜ್ಞೇಶ್ವರ, ಶ್ರೀನಂದಿ, ಆಂಜನೇಯ, ಸುಬ್ರಹ್ಮಣ್ಯಸ್ವಾಮಿ ಹಾಗೂ ಶರಣ ಶರಣೆಯರ ಮೂರ್ತಿ ಪ್ರತಿಷ್ಠಾಪನೆಯ 9ನೇ ವರ್ಷದ ಅಂಗವಾಗಿ ರಥೋತ್ಸವ ಶನಿವಾರ ಅದ್ದೂರಿಯಾಗಿ ಜರುಗಿತು.
ಇದನ್ನೂ ಓದಿ: 21 ರಂದು ಶಾಂತಾರಾಮ ತೀರ್ಥಾಶ್ರಮದಲ್ಲಿ ರಥೋತ್ಸವ
ರಥಕ್ಕೆ ವೀರಭದ್ರ ಶಿವಾಚಾರ್ಯ ಬಿಚ್ಚಾಲಿ, ನಾಗಭೂಷಣ ಶಿವಾಚಾರ್ಯ ಹೆಬ್ಬಾಳ, ವೀರಭದ್ರ ಶರಣರು ಕಾರಟಗಿ, ಸದಾನಂದ ತಾತ ಸಿದ್ಧಾಶ್ರಮ ವೆಂಕಟಗಿರಿ ಕ್ಯಾಂಪ್, ಮರುಳಸಿದ್ಧೇಶ್ವರ ಮಠ ಸಿದ್ದಯ್ಯತಾತ ಹಾಗೂ ಕಿಡಿಗಣಯ್ಯಸ್ವಾಮಿ ಉಮಳಿಹೊಸುರು ಚಾಲನೆ ನೀಡಿದರು.
ಬಾಜಾ ಭಜಂತ್ರಿ, ಡೊಳ್ಳು ಬಾರಿಸುತ್ತ ಜಯಘೋಷಗಳೊಂದಿಗೆ ರಥೋತ್ಸವ ಜರುಗಿತು. ಬೆಳಗ್ಗೆ ಮೂರ್ತಿಗಳಿಗೆ ವಿಶೇಷ ಪೂಜೆ ಹಾಗೂ ರೈತರ ಏಳಿಗೆಗಾಗಿ ಪ್ರಾರ್ಥಿಸಿ ಕುಂಕುಮಾರ್ಚನೆ, ಬಿಲ್ವಾರ್ಚನೆ, ಮಹಾರುದ್ರಾಭಿಷೇಕ, ರುದ್ರಹೋಮ ಹವನಾದಿಗಳು ಜರುಗಿದವು.