

ಚಿತ್ರದುರ್ಗ: ನಗರದ ಮೆದೇಹಳ್ಳಿ ರಸ್ತೆ ಶಾಂತಾರಾಮ ತೀರ್ಥಾಶ್ರಮದಲ್ಲಿ ಶ್ರೀ ರಾಜಯೋಗಿಸ್ವಾಮಿ ರಾಮತೀರ್ಥರ ಹಾಗೂ ಜಗನ್ಮಾತಾ ಚೂಡಾಮಣಿ ಮಾತಾಜಿ ಅವರ ಪುಣ್ಯಾರಾಧನೆ ಮತ್ತು ರಥೋತ್ಸವ ಜೂ.21ರ ಸಂಜೆ 4.30ಕ್ಕೆ ನೆರವೇರಲಿದೆ. ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಕಳಸ ಸ್ಥಾಪನೆ, ಗಣಪತಿ ಪೂಜೆ, ನವಗ್ರಹ ಪೂಜೆ, ಹೋಮ, ಗುರುಪೂಜೆ, ಪಂಚಾಮೃತಾಭಿಷೇಕ ನಂತರ ಮಹಾಮಂಗಳಾರತಿ ನೆರವೇರಲಿದೆ. ರಥೋತ್ಸವದಲ್ಲಿ ಭಕ್ತ ವೃಂದದವರಿಂದ ಭಜನೆ, ಕೀರ್ತನೆ ನಡೆಯಲಿದೆ. ಅನ್ನಸಂತರ್ಪಣೆಯಿರುತ್ತದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಶಾಂತಾರಾಮ ತೀರ್ಥಾಶ್ರಮ ಟ್ರಸ್ಟ್ ಸದಸ್ಯ ಗಿರೀಶ್ ಮನವಿ ಮಾಡಿದ್ದಾರೆ.