

ಕುಂದಾಪುರ: ಭಗತ್ ಸಿಂಗ್ ಸ್ವಾತಂತ್ರೃ ಹೋರಾಟಗಾರ ಮಾತ್ರವಲ್ಲ, ಅವರು ದೇಶದ ಸಂಪತ್ತು ಸೃಷ್ಟಿಸುವ ಕಾರ್ಮಿಕರ ಪರವಾದ ಹೋರಾಟ ನಡೆಸಿದ್ದರು ಎಂದು ಡಿವೈಎಫ್‌ಐ ತಾಲೂಕು ಉಪಾಧ್ಯಕ್ಷ ರವಿ ವಿ.ಎಂ. ಹೇಳಿದರು.
ಕುಂದಾಪುರ ಬಿ.ಸಿ.ರಸ್ತೆಯಲ್ಲಿ ಆಯೋಜಿಸಲಾಗಿದ್ದ ಸ್ವಾತಂತ್ರೃ ಹೋರಾಟಗಾರ ಭಗತ್ ಸಿಂಗ್, ರಾಜಗುರು, ಸುಖದೇವ್ ಅವರ ಹುತಾತ್ಮ ದಿನಾಚರಣೆಯಲ್ಲಿ ಮಾತನಾಡಿದರು.
ಭಗತ್ ಸಿಂಗ್ ಅವರು ಬ್ರಿಟಿಷ್ ಸರ್ಕಾರ ಕಾರ್ಮಿಕ ವಿರೋಧಿ ಮಸೂದೆ ತಂದಾಗ ಅಸೆಂಬ್ಲಿಗೆ ಮಾರುವೇಷದಲ್ಲಿ ಬಟುಕೇಶ್ವರ ದತ್ ಜತೆ ಹುಸಿ ಬಾಂಬ್ ಸಿಡಿಸಿ ಬಂಧನಕ್ಕೊಳಗಾಗಿದ್ದರು. ಇಂದು ಸ್ವದೇಶಿ ಸರ್ಕಾರ ದೇಶದ ಕಾರ್ಮಿಕ ಕಾನೂನು ತಿದ್ದುಪಡಿ ಮಾಡಿ ಏ.1ರಿಂದ ಮಸೂದೆ ಜಾರಿಗೆ ಪ್ರಯತ್ನಿಸುತ್ತಿವೆ. ಈ ಮಸೂದೆಗೆ ಪ್ರತಿಪಕ್ಷ ವಿರೋಧಿಸದೆ ಅನುಕೂಲ ಮಾಡಿಕೊಡುತ್ತಿವೆ. ಇದರ ವಿರುದ್ಧ ಕಾರ್ಮಿಕ ವರ್ಗ ಹೋರಾಟ ತೀವ್ರಗೊಳಿಸಬೇಕಾಗಿದೆ ಎಂದರು.
ಡಿವೈಎಫ್‌ಐ ಮುಖಂಡ ಉದಯ ಸ್ವಾಗತಿಸಿದರು. ಮಂಜುನಾಥ್ ಶೋಗನ್ ವಂದಿಸಿದರು.