

ಗಂಗೊಳ್ಳಿ: ಕುಂದಾಪುರ ರೋಜರಿ ಮಾತಾ ಚರ್ಚ್‌ನಲ್ಲಿ ಚರ್ಚ್ ಕುಟುಂಬ ಆಯೋಗದಿಂದ ಭಾನುವಾರ ವಿವಾಹಿತ ದಂಪತಿ ದಿನ ಆಚರಿಸಲಾಯಿತು.
ಧರ್ಮಗುರು ಪಾವ್ಲ್ ರೇಗೊ ಪವಿತ್ರ ಬಲಿದಾನ ಅರ್ಪಿಸಿದರು. ಪಾಲನಾ ಮಂಡಳಿ ಉಪಾಧ್ಯಕ್ಷ ಶಾಲೆಟ್ ರೆಬೆಲ್ಲೊ, ಸಂತ ಜೋಸೆಫ್ ಕಾನ್ವೆಂಟ್ ಮುಖ್ಯಸ್ಥೆ ಸುಪ್ರಿಯಾ ಶುಭ ಕೋರಿದರು. ಚರ್ಚ್ ಸರ್ವ ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಪಾಲನಾ ಮಂಡಳಿ ಕಾರ್ಯದರ್ಶಿ, ಸದಸ್ಯರು ಉಪಸ್ಥಿತರಿದ್ದರು. ಚರ್ಚ್ ಕುಟುಂಬ ಆಯೋಗ ಸಂಚಾಲಕಿ ಜೂಲಿಯಾನ ಮಿನೇಜೆಸ್ ಸ್ವಾಗತಿಸಿದರು. 125 ವಿವಾಹಿತ ದಂಪತಿ ಭಾಗವಹಿಸಿದ್ದರು.