ಮಾರ್ಪನಡ್ಕ ವಾರ್ಡ್ ಸಮಾವೇಶ

New Project (14)
Published on

ಬದಿಯಡ್ಕ: ಬಿಜೆಪಿ ಜಯನಗರ 11ನೇ ವಾರ್ಡ್ ಸಮಿತಿ ಸಮಾವೇಶ ಮಾರ್ಪನಡ್ಕ ಪದ್ಮಶ್ರೀ ಸಭಾಂಗಣದಲ್ಲಿ ಜರುಗಿತು. ಪಕ್ಷದ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್. ಉದ್ಘಾಟಿಸಿದರು. ಪಕ್ಷದ ಕೋಝಿಕೋಡ್ ವಲಯ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ ಮಾರ್ಗದರ್ಶನ ನೀಡಿದರು. ವಾರ್ಡ್ ಸದಸ್ಯರಾದ ಹರೀಶ ಗೋಸಾಡ ಅವರನ್ನು ಸನ್ಮಾನಿಸಲಾಯಿತು.

ವಾಸುದೇವ ಭಟ್ ಚೋಕೆಮೂಲೆ ಅಧ್ಯಕ್ಷತೆ ವಹಿಸಿದ್ದರು. ಬೂತ್ ಅಧ್ಯಕ್ಷ ನಾರಾಯಣ ನಾಯಕ್, ದಾಮೋದರ ಮಾರ್ಪನಡ್ಕ, ಸೂರ್ಯನಾರಾಯಣ ಮಾಳಿಗೆಮನೆ, ಶಿವಪ್ಪ ನಾಯಕ್, ನಾಗರಾಜ ಭಟ್ ಉಪ್ಪಂಗಳ, ಕೃಷ್ಣ ನಾಯಕ್ ಮೊದಲಾದವರಿದ್ದರು. ಸವಿತಾ ಮಾರ್ಪನಡ್ಕ ಸ್ವಾಗತಿಸಿದರು. ಸುರೇಶ್ ಬಿ.ಕೆ. ನಿರೂಪಿಸಿದರು. ಪ್ರಕಾಶ ಪಾವೂರು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net