ಗಾಂಜಾ ಮಾರುತ್ತಿದ್ದವರ ಬಂಧನ

Ganja-e-consumo
Published on

ಕುಮಟಾ: ತಾಲೂಕಿನ ಮೂರೂರು ರಸ್ತೆಯ ಸಿದ್ದನಬಾವಿ ಘಟ್ಟದ ಬಳಿ ಗಾಂಜಾ ಸಮೇತ ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ನಡೆದಿದೆ. ಮೂರೂರು ಅಂಗಡಿಕೇರಿ ನಿವಾಸಿ ಪ್ರಸಾದ ಹೊಸಳ್ಳಿ (24) ಹಾಗೂ ಕಲ್ಲಬ್ಬೆಯ ಸುನೀಲ ಸತ್ಯನಾರಾಯಣ ಮುಕ್ರಿ(30) ಬಂಧಿತರು.

ಅಂದಾಜು 10 ಸಾವಿರ ರೂ. ಮೌಲ್ಯದ 230 ಗ್ರಾಂ ಗಾಂಜಾವನ್ನು ಸಿದ್ದನಬಾವಿ ಘಟ್ಟದ ಕಟ್ಟಡವೊಂದರ ಬಳಿ ನಿಂತಿದ್ದ ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಟ್ಕಳ: ಪಟ್ಟಣದ ಮ್ಯಾಂಗೋ ಫಾರ್ಮ ಹೌಸ್ ಬಳಿಯಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಗುರುವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪಟ್ಟಣದ ಬದ್ರಿಯಾ ಕಾಲನಿಯ ಅಬುಹುರೇರಾ ಮಸೀದಿ ಬಳಿಯ ಜನೀವುಲ್ಲಾ ಮುಜಾಬುಲ್ಲಾ ಶೇಖ್ ಬಂಧಿತ. ಭಟ್ಕಳ ಗ್ರಾಮೀಣ ಠಾಣಾ ಎಎಸ್​ಐ ಕೃಷ್ಣಾನಂದ ನಾಯ್ಕ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಗಾಂಜಾ ಅಮಲಿನಲ್ಲಿದ್ದವರು ಪೊಲೀಸರ ವಶಕ್ಕೆ: ಪಟ್ಟಣದ ಮದೀನಾ ಗ್ರೌಂಡ ಬಳಿಯ ಸಾರ್ವಜನಿಕ ರಸ್ತೆಯಲ್ಲಿ ಗಾಂಜಾ ಸೇವಿಸಿ ತೂರಾಡುತ್ತಿದ್ದ ನಾಲ್ವರನ್ನು ಗ್ರಾಮೀಣ ಠಾಣೆಯ ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ.
ಉತ್ತರ ಪ್ರದೇಶ ಮೂಲದ ಮಸೂದ ಅರ್ಷದ್​ಅಲಿ, ಕುಂದಾಪುರ ತಾಲೂಕಿನ ಮುನಾಫ್ ಅಬ್ದುಲ್ ರೆಹಮಾನ, ಬೈಂದೂರಿನ ವಿಲಾಸ ಲಕ್ಷಣ ಹಾಗೂ ವಿಶಾಲ ಈರಯ್ಯ ಮೊಗೇರ ಪೊಲೀಸರ ವಶದಲ್ಲಿರುವವರು.

ಇವರು ಗುರುವಾರ ಅಮಲು ಪದಾರ್ಥಸೇವಿಸಿ ಸಾರ್ವಜನಿಕ ರಸ್ತೆಯಲ್ಲಿ ತೂರಾಡುತ್ತಿದ್ದ ಪೊಲೀಸರು ಗಮನಿಸಿ ವಿಚಾರಣೆ ನಡೆಸಿದ್ದಾರೆ. ಬಳಿಕ ಗಾಂಜಾ ಸೇವಿಸಿದ್ದು ತಿಳಿದು ಬಂದಿದ್ದು ಕುಂದಾಪುರ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ಖಚಿತಪಡಿಸಿಕೊಂಡು ವಶಕ್ಕೆ ಪಡೆದುಕೊಂಡಿದ್ದಾರೆ. ಎಎಸ್​ಐ ಕೃಷ್ಣಾ ನಾಯ್ಕ ಮುಂದಿನ ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net