ಕೊಡಂಗಲ್ಲು ದೇವಸ್ಥಾನದಲ್ಲಿ ಮಾರಿಪೂಜಾ ಉತ್ಸವ

New Project (2)
Published on

ಮೂಡುಬಿದಿರೆ: ಇಲ್ಲಿನ ಕೊಡಂಗಲ್ಲು ಉಚ್ಚಂಗಿ ಮಾರಿಯಮ್ಮ ದೇವಸ್ಥಾನದಲ್ಲಿ ಮಾರಿಪೂಜಾ ಉತ್ಸವ ಜರುಗಿತು.

ಮಂಗಳವಾರ ಬೆಳಗ್ಗೆ ದೇವಿ ಭಂಡಾರದೊಂದಿಗೆ ಮೂಡುಬಿದಿರೆ ಕೈಕಂಬ ಕಟ್ಟೆಗೆ ತೆರಳಿ ಕಟ್ಟೆಯಲ್ಲಿ ದೇವಿಯ ಬೊಂಬೆ ಪ್ರತಿಷ್ಠಾಪನೆ ನಡೆಯಿತು. ರಾತ್ರಿ ಕಲ್ಕುಡ, ಕಲ್ಲುರ್ಟಿ ದೈವಗಳ ನೇಮ ನೆರವೇರಿತು. ಬಳಿಕ ಸಕಲ ಬಿರುದಾವಳಿಗಳೊಂದಿಗೆ ಬೊಂಬೆಯನ್ನು ಕ್ಷೇತ್ರಕ್ಕೆ ತರಲಾಯಿತು. ಪಿಂಗಾರ ಕಲಾವಿದೆರ್ ತಂಡದಿಂದ ಕದಂಬ ಹಾಸ್ಯಮಯ ನಾಟಕ, ಬುಧವಾರ ಸಂಜೆ ದೇವಿ ದರ್ಶನದ ಬಳಿಕ ಕೊಡಂಗಲ್ಲು ಕಾಡಿನಲ್ಲಿ ಬೊಂಬೆ ವಿಸರ್ಜನೆ ನೆರವೇರಿತು.

ಆಡಳಿತ ಮಂಡಳಿ ಅಧ್ಯಕ್ಷ ದೇಜು, ಉಪಾಧ್ಯಕ್ಷ ಸಂತೋಷ, ಕಾರ್ಯದರ್ಶಿ ಸಂದೀಪ್ ಕೆ., ಜತೆ ಕಾರ್ಯದರ್ಶಿಗಳಾದ ರಮೇಶ್ ಕೆ.ಎಸ್., ಪ್ರಕಾಶ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುರೇಶ್ ಕೋಟ್ಯಾನ್, ಉಪಾಧ್ಯಕ್ಷ ಶಿವಪ್ರಸಾದ್ ಹೆಗ್ಡೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net